Thursday 15 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 23 - 25


ತಸ್ಮಾತ್ ಪುನಃ ಸರ್ವಸುರಾಃ ಪ್ರಸೂತಾಸ್ತೇ ಜಾನಮಾನಾ ಅಪಿ ನಿರ್ಣಯಾಯ ।
ನಿಸ್ಸೃತ್ಯ ಕಾಯಾದುತ ಪದ್ಮಯೋನೇಃ ಸಮ್ಪ್ರಾವಿಶನ್ ಕ್ರಮಶೋ ಮಾರುತಾನ್ತಾಃ ॥೩.೨೩॥

ಅದರಿಂದ ಆಯಿತು ಮತ್ತೆ ಎಲ್ಲಾ ದೇವತೆಗಳ ಜನನ,
ಯಾರು ಶ್ರೇಷ್ಠರೆಂದು ನಿರ್ಣಯಿಸುವ ಅಣಕು ಕದನ.
ಬ್ರಹ್ಮನದೇಹದಿಂದ ಒಬ್ಬೊಬ್ಬರಾಗಿ ಹೊರನಡೆದ ದೇವತಾಗಣ,
ನಿಶ್ಚಲವಾಯಿತು ಬ್ರಹ್ಮದೇಹ ಕಡೆಗೆ ಹೊರಬರಲು ಮುಖ್ಯಪ್ರಾಣ.
ಮತ್ತೆ ವಿವಿಧ ದೇವತೆಗಳಿಂದ ಬ್ರಹ್ಮದೇಹ ಪ್ರವೇಶ,
ಮುಖ್ಯಪ್ರಾಣ ಹೊಕ್ಕಮೇಲೇ ಚಲನೆಯ ವಿಶೇಷ.

ಪಪಾತ ವಾಯೋರ್ಗಮನಾಚ್ಛರೀರಂ ತಸ್ಯೈವ ಚಾsವೇಶತ ಉತ್ಥಿತಂ ಪುನಃ ।
ತಸ್ಮಾತ್ ಸ ಏಕೋ ವಿಬುಧಪ್ರಧಾನ ಇತ್ಯಾಶ್ರಿತಾ ದೇವಗಣಾಸ್ತಮೇವ ।
ಹರೇರ್ವಿರಿಞ್ಚಸ್ಯ ಚ ಮಧ್ಯಸಂಸ್ಥಿತೇಃ ತದನ್ಯದೇವಾಧಿಪತಿಃ ಸ ಮಾರುತಃ  ॥೩.೨೪॥

ತತೋ ವಿರಿಞ್ಚೋ ಭುವನಾನಿ ಸಪ್ತ ಸಸಪ್ತಕಾನ್ಯಾಶು ಚಕಾರ ಸೋsಬ್ಜಾತ್ ।
ತಸ್ಮಾಚ್ಚ ದೇವಾ ಋಷಯಃ ಪುನಶ್ಚ ವೈಕಾರಿಕಾದ್ಯಾಃ ಸಶಿವಾ ಬಭೂವುಃ  ॥೩.೨೫॥

ಯಾರ ನಿರ್ಗಮನದಿಂದಾಯಿತೋ ಚಲನ ಶೂನ್ಯ,
ಯಾರ ಆಗಮನದಿಂದಾಯಿತೋ ಚಲನ ಮಾನ್ಯ,
ಸಿದ್ಧವಾಯಿತು ಅದು ಮುಖ್ಯಪ್ರಾಣನ ಹಿರಿಮೆ,
ಉಪನಿಷತ್ಗಳಲ್ಲೂ ಪ್ರಸ್ತಾಪವಾದ ಪ್ರಾಣ ಮಹಿಮೆ.

ಮುಖ್ಯಪ್ರಾಣನ ತೆರಳುವಿಕೆಯಿಂದ ಬಿದ್ದ ಶರೀರ,
ಅವನಾಗಮನದಿಂದ ಎದ್ದ ಚೈತನ್ಯದ ವ್ಯಾಪಾರ.
ಸಿದ್ಧವಾಯಿತು ದೇವತೆಗಳಲ್ಲಿ ಪ್ರಾಣನ ಉತ್ತಮತ್ವ,
ಎಲ್ಲಾ ದೇವತಾಗಣ ಅವನನ್ನೇ ಆಶ್ರಯಿಸಿದ ತತ್ವ.

ಆಚಾರ್ಯರು ಕೊಡುವ ಸೂಕ್ಷ್ಮ ವಿಚಾರ,
ಬ್ರಹ್ಮದೇಹದಲ್ಲಿ ಬ್ರಹ್ಮ ಹರಿ ಯಿದ್ದ ವ್ಯಾಪಾರ.
ಅವರಿಬ್ಬರೂ ಒಳಗಿದ್ದರು ತಟಸ್ಥ,
ಆಯಿತು ಪ್ರಾಣನ ಹಿರಿಮೆಯ ಇತ್ಯರ್ಥ.

ನಿರ್ಧಾರವಾಯಿತು ದೇವತೆಗಳಲ್ಲಿ ಹಿರಿಯ ಮುಖ್ಯಪ್ರಾಣ,
ಆಯಿತು ಪದ್ಮಮೂಲದ ಹದಿನಾಲ್ಕು ಲೋಕಗಳ ಅನಾವರಣ.
ಬ್ರಹ್ಮನಿಂದ ಮತ್ತೆ ವೈಕಾರಿಕ ಅಹಂಕಾರದ ಪ್ರಯೋಗ,
ದೇವತೆಗಳು ಮತ್ತು ಸದಾಶಿವ ಮರುಹುಟ್ಟು ಪಡೆದರಾಗ.

(ಇಂದಿನ ಮಾಲಿಕೆಯಲ್ಲಿ ತಾನಾಗಿಯೇ ಆದ ಶಿವನ ಹುಟ್ಟು,
ನಾಳೆಯ ಶಿವರಾತ್ರಿಗೆ ಇಂದೇ ದೇವತಾಶೀರ್ವಾದದ ಗುಟ್ಟು).
[Contributed by Shri Govind Magal]

No comments:

Post a Comment

ಗೋ-ಕುಲ Go-Kula