Monday 12 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 17 - 19

ಬುದ್ಧ್ಯಾಮುಮಾಯಾಂ ಸ ಶಿವಸ್ತಿರೂಪೋ ಮನಷ್ಚ ವೈಕಾರಿಕದೇವಸಙ್ಘಾನ್ ।
ದಶೇನ್ದ್ರಿಯಾಣ್ಯೇವ ಚ ತೈಜಸಾನಿ ಕ್ರಮೇಣ ಖಾದೀನ್ ವಿಷಯೈಶ್ಚ ಸಾರ್ಧಮ್ ॥೩.೧೭॥

ಬುದ್ಧ್ಯಭಿಮಾನಿ ಉಮೆಯೊಂದಿಗೆ ಮೂರು ರೂಪದ ಶಿವ ತಾನು ,
ಸೃಜಿಸಿದ ವೈಕಾರಿಕಹಂಕಾರದ ಮನಸು ಇಂದ್ರಿಯಾಭಿಮಾನಿ ದೇವತೆಗಳನ್ನು.
ತೈಜಸಹಂಕಾರದಿಂದ ಮಾಡಿದ ದಶೇಂದ್ರಿಯಗಳ ಸೃಷ್ಟಿ ,

ತಾಮಸಹಂಕಾರದಿಂದ ಪಂಚಭೂತಗಳು ತನ್ಮಾತ್ರಗಳಾದವು ಸಮಷ್ಟಿ .

ಪುಂಸಃ ಪ್ರಕೃತ್ಯಾಂ ಚ ಪುನರ್ವಿರಿಞ್ಚಾತ್ ಶಿವೋsಥ ತಸ್ಮಾದಖಿಲಾಃ ಸುರೇಶಾಃ ।
ಜಾತಾಃ ಸಶಕ್ರಾಃ ಪುನರೇವ ಸೂತ್ರಾತ್ ಶ್ರದ್ಧಾ ಸುತಾನಾಪ ಸುರಪ್ರವೀರಾನ್ ।
ಶೇಷಂ ಶಿವಂ ಚೇನ್ದ್ರಮಥೇನ್ದ್ರತಶ್ಚ ಸರ್ವೇ ಸುರಾ ಯಜ್ಞಗಣಾಶ್ಚ ಜಾತಾಃ ॥೩.೧೮॥
ಪುನಶ್ಚ ಮಾಯಾ ತ್ರಿವಿಧಾ ಬಭೂವ ಸತ್ತ್ವಾದಿರೂಪೈರಥ ವಾಸುದೇವಾತ್ ।
ಸತ್ತ್ವಾತ್ಮಿಕಾಯಾಂ ಸ ಬಭೂವ ತಸ್ಮಾತ್ ಸ ವಿಷ್ಣುನಾಮೈವ ನಿರನ್ತರೋSಪಿ ।
ರಜಸ್ತನೌ ಚೈವ ವಿರಿಞ್ಚ ಆಸೀತ್ ತಮಸ್ತನೌ ಶರ್ವ ಇತಿ ತ್ರಯೋSಸ್ಮಾತ್ ॥೩.೧೯॥

ಮತ್ತೆ ಬ್ರಹ್ಮ ಸರಸ್ವತಿಯಲ್ಲಿ ಶಿವನ ಹುಟ್ಟು,
ಅವರಿಂದ ದೇವತೆಗಳ ಎರಡನೇ ಹುಟ್ಟಿನ ಗುಟ್ಟು.
ಪುನಃ ವಾಯು ಭಾರತಿಯರಲ್ಲಿ ಹುಟ್ಟಿದ ಸುರಶ್ರೇಷ್ಠರು,
ಶೇಷ ,ಶಿವ ,ಇಂದ್ರ ಮತ್ತೆ ಹುಟ್ಟಿ ಬಂದ ಸುರರ ಇಷ್ಟರು.
ದೇವತೆಗಳಲ್ಲಿನ ಮರುಹುಟ್ಟಿನ ಗುಟ್ಟಿನ ಪ್ರತಿಪಾದನ,
ಇಂದ್ರನಿಂದಾದ ಯಜ್ಞಾಭಿಮಾನಿ ದೇವತೆಗಳ ಜನನ.
ಸತ್ವಗುಣಕ್ಕೆ ಶ್ರೀ ,ರಜೋಗುಣಕ್ಕೆ ಭೂ ,ತಮೋಗುಣಕ್ಕೆ ದುರ್ಗೆಯ ರೂಪ,
ಮಾಯೆಯೇ ಮೂರು ರೂಪ ತೆಗೆದುಕೊಂಡು ಮೆರೆದ ಪ್ರತಾಪ.
ಶ್ರೀದೇವಿಯಲ್ಲಿ ವಿಷ್ಣು ಹುಟ್ಟಿಬಂದ
ಭೂದೇವಿಯಲ್ಲಿ ಬ್ರಹ್ಮ ಮೈತಾಳಿದ,
ದುರ್ಗೆಯಲ್ಲಿ ಶಿವ ತಾನು ಜನಿಸಿದ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula