Monday 5 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 01


ತೃತಿಯೋsಧ್ಯಾಯಃ

[ಸರ್ಗಾನುಸರ್ಗಲಯಪ್ರಾದುರ್ಭಾವನಿರ್ಣಯಃ]


(ಮೊದಲಿಗೆ ಬಂದಿರುವ ವ್ಯಾಸ ರಾಮ ಕೃಷ್ಣ ಸ್ತುತಿ,
ಹೇಳುತ್ತದೆ ವೇದಾಂತ ಪ್ರಮೇಯದ ದಿವ್ಯ ಮತಿ)

ಜಯತ್ಯಜೋsಖಣ್ಡಗುಣೋರುಮಣ್ಡಲಃ ಸದೋದಿತೋ ಜ್ಞಾನಮರೀಚಿಮಾಲೀ ।
ಸ್ವಭಕ್ತಹಾರ್ದೋಚ್ಚತಮೋನಿಹನ್ತಾ ವ್ಯಾಸಾವತಾರೋ ಹರಿರಾತ್ಮಭಾಸ್ಕರಃ ॥೩.೦೧॥

ಸುತ್ತ ಮಂಡಲವಿದ್ದು ನಿತ್ಯ ಹೊಳೆಯುವ ಸೂರ್ಯ,
ಜ್ಞಾನಮಂಡಲವಿದ್ದು ಗುಣ ಪ್ರಕಾಶಿಸುವ ವ್ಯಾಸಾರ್ಯ.
ಯಾವಾಗಲೂ ಬೆಳಗುವ ಅವ ಸೂರ್ಯ,
ಸೂರಿಗಳಿಂದ ಸ್ತುತಿಸಲ್ಪಡುವವ  ವ್ಯಾಸಾರ್ಯ.
ಸೂರ್ಯನ ಕಿರಣವದು ಬೆಳಕಿನ ಮೂಲ -ಪ್ರಾಕೃತ,
ವ್ಯಾಸಕಿರಣವದು  ಅಜ್ಞಾನಕ್ಕೆ ಶೂಲ  -  ಅಪ್ರಾಕೃತ.
ಸೂರ್ಯನಿಂದ ಹೊರ ಜಗತ್ತಿಗಷ್ಟೇ - ಪ್ರಕಾಶ,
ವ್ಯಾಸರು ಬೆಳಗುತ್ತಾರೆ ಹೊರಗಷ್ಟಲ್ಲದೇ ಹೃದಯಾಕಾಶ.
ಇಂತಹ ವ್ಯಾಸರವರು ಉತ್ಕೃಷ್ಟ,
ಆಚಾರ್ಯರ ಅರಿವದು ಸುಸ್ಪಷ್ಟ.
[Contributed by Shri Govind Magal]


No comments:

Post a Comment

ಗೋ-ಕುಲ Go-Kula