Wednesday 6 December 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 114 - 117

ಅಪರೋಕ್ಷದೃಶೇರ್ಹೇತುರ್ಮುಕ್ತಿಹೇತುಶ್ಚ ಸಾ ಪುನಃ ।
ಸೈವಾsನನ್ದಸ್ವರೂಪೇಣ ನಿತ್ಯಾ ಮುಕ್ತೇಷು ತಿಷ್ಠತಿ ॥೧.೧೧೪॥

ಯಥಾ ಶೌಕ್ಲ್ಯಾದಿಕಂ ರೂಪಂ ಗೋರ್ಭವತ್ಯೇವ ಸರ್ವದಾ ।
ಸುಖಜ್ಞಾನಾದಿಕಂ ರೂಪಮೇವಂ ಭಕ್ತೇರ್ನಚಾನ್ಯಥಾ ॥೧.೧೧೫॥

ಭಗವಂತನನ್ನು ಪ್ರತ್ಯಕ್ಷ ಕಾಣಲು ಭಕ್ತಿಯೇ ಕಾರಣ,
ಮುಕ್ತಿಯ ಹೊಂದಲು ಮೂಲ ಮುಖ್ಯ ಹೂರಣ,
ಆನಂದ ಸ್ವರೂಪ ಭಕ್ತಿ ಮುಕ್ತರಲ್ಲೂ ಉಂಟು,
ಮುಕ್ತರಿಗದು ಸ್ವರೂಪದಿ ಹಾಸುಹೊಕ್ಕಾದ ಗಂಟು .

ಒಂದು ಬಿಳಿಯಾದ ಹಸುವಿನ ಬಣ್ಣ,
ಹಸುವಿನೊಂದಿಗೇ ಅದು ಮೈಗೂಡಿದ ಗುಣ,
ಹಾಗೇ ಮುಕ್ತರಾದ ಜೀವರ ಭಾವ,
ಜ್ಞಾನ ಸುಖ ಭಕ್ತಿಯ ಪಾಕವದು ಜೀವ.

ದೇಹಾವಸ್ಥೆಯಲ್ಲಿ ಗುಣ ಗುಣಿಗಳಿದೆ ವ್ಯತ್ಯಾಸ,
ವಯಸ್ಸಿಗನುಗುಣವಾಗಿ ಬದಲಾಗುವ ವಿಶೇಷ,
ದೇಹಕ್ಕಷ್ಟೇ ಗುಣಗಳ ಏರಿಳಿತಗಳ ತ್ರಾಸ,
ಮುಕ್ತರಾದವರಿಗಿಲ್ಲ ಅವರ ಗುಣ ಹ್ರಾಸ,
ಮುಕ್ತಿಯಲ್ಲಿ ಎಲ್ಲವೂ ಒಂದಕ್ಕೊಂದು ಸೇರಿದ ಪಾಕ,
ಜ್ಞಾನ ಸುಖ ಭಕ್ತಿಗಳೆಲ್ಲವೂ ಗುಣವೇ ಆದ ಲೋಕ.

ಭಕ್ತ್ಯೈವ ತುಷ್ಟಿಮಭ್ಯೇತಿ ವಿಷ್ಣುರ್ನಾನ್ಯೇನ ಕೇನಚಿತ್ ।
ಸ ಏವ ಮುಕ್ತಿದಾತಾ ಚ ಭಕ್ತಿಸ್ತತ್ರೈಕಕಾರಣಮ್ ॥೧.೧೧೬॥

ನಿರ್ಮಲ ಭಕ್ತಿಯಿಂದಷ್ಟೇ ಪ್ರೀತನಾಗುತ್ತಾನೆ ಭಗವಂತ,
ಒಲಿದ ಭಗವಂತನಲ್ಲದೆ ಬೇರಿನ್ಯಾರು ಇನ್ನು ಮುಕ್ತಿದಾತ?
ಬೇರೆ ಇನ್ಯಾವುದಕ್ಕೂ ಕರಗಿ ಒಲಿಯುವುದಿಲ್ಲ ನಾರಾಯಣ,
ಅವನ ಪರಮಾನುಗ್ರಹಕ್ಕೆ ಭಕ್ತಿಯೇ ಮೂಲ ಕಾರಣ .

ಬ್ರಹ್ಮಾದೀನಾಂ ಚ ಮುಕ್ತಾನಾಂ ತಾರತಮ್ಯೇ ತು ಕಾರಣಮ್ ।
ತಾರತಮ್ಯಸ್ಥಿತಾsನಾದಿನಿತ್ಯಾ ಭಕ್ತಿರ್ನಚೇತರತ್ ॥೧.೧೧೭॥

ಬ್ರಹ್ಮಾದಿ ಮುಕ್ತರ ತಾರತಮ್ಯಕ್ಕೆ ಭಕ್ತಿಯೇ ಕಾರಣ,
ಮುಕ್ತರ ಆನಂದದ ಮಾಪನವದು ಭಕ್ತಿಯ ಹೂರಣ,
ಭಕ್ತಿಯಲ್ಲಿ ಎಂದೂ ಮೇಲೆ ಅವ ಚತುರ್ಮುಖ,
ಸಹಜವಾಗೇ ಎಲ್ಲರಿಗಿಂತ ಹೆಚ್ಚದು ಬ್ರಹ್ಮನ ಸುಖ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula