Monday 4 December 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 101 -108

ಪರಾ ಪೂರ್ವೇಷಾಂ ಸಖ್ಯಾ ವೃಣಕ್ತಿ ‘ವಿತರ್ತುರಾಣೋ ಅಪರೇಭಿರೇತಿ ।
ಅನಾನುಭೂತೀರವಧೂನ್ವಾನಃ ‘ಪೂರ್ವೀರಿನ್ದ್ರಃ ಶರದಸ್ತರ್ತರೀತಿ’ ॥೧.೧೦೧॥

ಭಗವಂತನಿಂದ ಅಸುರರ ಗೆಳೆತನದ ನಿರಾಕರಣೆ,
ತನ್ನ ಪ್ರಾಮಾಣಿಕ ಭಕ್ತರ ಗೆಳೆತನದ ಸ್ವೀಕರಣೆ,
ಎರಡೂ ಅಲ್ಲದವರನ್ನು ಪಕ್ಕಕ್ಕಿಡುವ ಅನುಸರಣೆ,
ಹಿಂದೂ ಇಂದೂ ಮುಂದೂ ಇದವನ ಧೋರಣೆ.

ತಮೇವಂ ವಿದ್ವಾನಮೃತ ಇಹ ಭವತಿ ‘ನಾನ್ಯಃ ಪನ್ಥಾಅಯನಾಯ ವಿದ್ಯತೇ’ ।
ತಮೇವ ವಿದಿತ್ವಾsತಿ ಮೃತ್ಯುಮೇತಿ ‘ನಾನ್ಯಃ ಪನ್ಥಾ ವಿದ್ಯತೇsಯನಾಯ’ ॥೧.೧೦೨॥

(ತಮೇವಂ ವಿದ್ವಾನ... ಇದು ಪುರುಷಸೂಕ್ತ. ತೈತ್ತಿರೀಯಾರಣ್ಯಕದಲ್ಲಿ  ಬಂದಿರುವ ಶ್ಲೋಕವಿದು(೩.೧೨.೭). 
ತಮೇವ ವಿದಿತ್ವಾsತಿ ಮೃತ್ಯುಮೇತಿ .... ಇದು ಶ್ವೇತಾಶ್ವತರ ಉಪನಿಷತ್ತಿನಲ್ಲಿಬಂದಿರುವ ಶ್ಲೋಕ(೩.೮).)

ನಾರಾಯಣನ ಸರ್ವೋತ್ತಮತ್ವದ ಜ್ಞಾನ,
ಅವನ ಸರ್ವೋತ್ಕೃಷ್ಟತೆಯ ಸ್ಥಾನ ಮಾನ,
ಇದನ್ನು ಅರಿತವನು ಹರಿಯನುಗ್ರಹಕ್ಕೆ ಯೋಗ್ಯ,
ಬೇರೆ ಯಾವುದೂ ಇಲ್ಲ -ಮೋಕ್ಷ ಪಡೆವ ಭಾಗ್ಯ,
ಭಗವಂತನನ್ನು ಅರಿತವ ಮಾತ್ರ ಮೃತ್ಯು ದಾಟಬಲ್ಲ,
ಅರಿವಲ್ಲದೆ ಮುಕ್ತಿಯ ಸಾಧನೆಗೆ ಅನ್ಯ ಮಾರ್ಗವಿಲ್ಲ.

ಯಸ್ಯ ದೇವೇ ಪರಾ ಭಕ್ತಿರ್ಯಥಾ ದೇವೇ ತಥಾ ಗುರೌ ।
ತಸ್ಯೈತೇ ಕಥಿತಾ ಹ್ಯರ್ಥಾಃ ಪ್ರಕಾಶನ್ತೇ ಮಹಾತ್ಮನಃ’ ॥೧.೧೦೩॥

ಯಾರಿಗಿದೆ ಶ್ರೀಹರಿಯಲ್ಲಿ ಪರಮ ಭಕ್ತಿ,
ದೇವತಾ ಗುರುಗಳಲ್ಲಿ ಯೋಗ್ಯ ಅನುರಕ್ತಿ,
ಅಂತಹ ಮಹಾತ್ಮನಿಗಾಗುತ್ತದೆ ಮಹಾಭಾರತದ ದರ್ಶನ,
ದರ್ಶನವೇ ಮಂಥನದಿಂದಾಗುತ್ತದೆ ಮೋಕ್ಷಕ್ಕೆ ಸಾಧನ.
ಭಕ್ತ್ಯಾರ್ಥಾನ್ಯಖಿಲಾನ್ಯೇವ ಭಕ್ತಿರ್ಮೋಕ್ಷಾಯ ಕೇವಲಾ ।
ಮುಕ್ತಾನಾಮಪಿ ಭಕ್ತಿರ್ಹಿ ನಿತ್ಯಾನನ್ದಸ್ವರೂಪಿಣೀ ॥೧.೧೦೪॥

ದಾನ ತೀರ್ಥಸ್ನಾನ ಯಜ್ಞ ತಪ ಯಾತ್ರೆ ,
ಇವೆಲ್ಲಾ ತುಂಬಿಸಲಿಕ್ಕೆ ಭಕ್ತಿಯ ಪಾತ್ರೆ ,
ಆ ನಿರ್ಮಲ ಭಕ್ತಿಯಿಂದಲೇ ಮೋಕ್ಷ ಸಾಧ್ಯ ,
ಮುಕ್ತರಾದವರು ಸ್ವರೂಪಾನಂದಕ್ಕೆ ಬಾಧ್ಯ.

ಜ್ಞಾನಪೂರ್ವಃ ಪರಃ ಸ್ನೇಹೋ ನಿತ್ಯೋ ಭಕ್ತಿರಿತೀರ್ಯತೇ’ ।
ಇತ್ಯಾದಿ ವೇದವಚನಂ ಸಾಧನಪ್ರವಿಧಾಯಕಮ್ ॥೧.೧೦೫॥

 (ಅದರಿಂದಾಗಿಯೇ ಗಾಯತ್ರಂ ತ್ವೋ ಗಾಯತಿ ಶಕ್ವರೀಷು (ಋಗ್ವೇದ, ೧೦.೭೧.೧೧) ಎನ್ನುವ ವೇದದ ಮಾತು ಸಂಗತ ಆಗುತ್ತದೆ. ಇನ್ನು ತೈತ್ತಿರೀಯ ಉಪನಿಷತ್ತಿನಲ್ಲಿ ಬ್ರಹ್ಮದೇವರು ಹೇಳಿಕೊಂಡಿರುವಂತೆ  ಹಾವು ಹಾವು ಹಾವು ಅಹಮನ್ನಮಹಮನ್ನಮಹಾಮನ್ನಮ್ । ಅಹಮನ್ನಾದಃ...)

ಜ್ಞಾನಪೂರ್ವಕವಾದ ಭಗವಂತನ ಉತ್ಕೃಷ್ಟತೆಯ ಅರಿವು,
ಕಾಮನೆಯಿರದ ಸ್ನೇಹ ಪ್ರೀತಿ -ಹರಿಸುವುದು ಭಕ್ತಿಯ ಹರಿವು,
ಅದರ ಸಂಪೂರ್ಣ ವಿಕಾಸವಾದಾಗಲೇ ಅದು ಮೋಕ್ಷ,
ಅಂಥವರದೆಲ್ಲದೂ ಸ್ವರೂಪಾನಂದ ಅನುಭವಿಸುವ ಕಕ್ಷ.

ಬ್ರಹ್ಮದೇವ ಹೇಳಿಕೊಂಡ ಉಪನಿಷತ್ ವಾದ,
ನಾನೇ ಅನ್ನ -ನಾನೇ ಅನ್ನದ -ನಾನೇ ಅನ್ನಾದ,
ಹರಿ ಅನುಗ್ರಹದಿಂದ ಎನಗೆ ಪೂರ್ಣಾನಂದ,
ಸ್ಪಷ್ಟವಾಗುತ್ತದೆ ಜೀವ-ಈಶರ ಭೇದ,
ಭಕ್ತಿಯದು ಜೀವರ ಸ್ವರೂಪದ ನಾದ,
ಮುಕ್ತಿಯದು ಸ್ವರೂಪದ ವಿಕಾಸವಾದ.

ನಿಶ್ಯೇಷಧರ್ಮಕರ್ತಾsಪ್ಯಭಕ್ತಸ್ತೇ ನರಕೇ ಹರೇ ।
ಸದಾ ತಿಷ್ಠತಿ ಭಕ್ತಶ್ಚೇದ್ ಬ್ರಹ್ಮಾಹಾsಪಿ ವಿಮುಚ್ಯತೇ’ ॥೧.೧೦೬॥

ನಿನ್ನ (ಭಗವಂತನ)ಭಕ್ತನಲ್ಲದವನು ಮಾಡಿದ ಧರ್ಮ,
ನರಕವಾಸವೇ ಅವನಿಗೆ ಅನಿವಾರ್ಯವಾದ ಕರ್ಮ,
ನಿನ್ನ ಭಕ್ತ ಮಾಡಿದರೂ ಬ್ರಹ್ಮಹತ್ಯಾ ಪಾಪ,
ಅವನಿಗಂಟುವುದಿಲ್ಲ ನರಕದ ಯಾವ ತಾಪ,
ಇದು ಬ್ರಹ್ಮಹತ್ಯೆಗೆ ಕೊಟ್ಟ ಪರವಾನಿಗೆ ಅಲ್ಲ,
ಭಕ್ತಿಯ ತೀವ್ರಮಹತ್ವ ಹೇಳುವ ಮಾತಿನ ಬೆಲ್ಲ.


ಧರ್ಮೋ ಭವತ್ಯಧರ್ಮೋsಪಿ ಕೃತೋ ಭಕ್ತೈಸ್ತವಾಚ್ಯುತ ।
ಪಾಪಂ ಭವತಿ ಧರ್ಮೋsಪಿ ಯೋ ನ ಭಕ್ತೈಃ ಕೃತೋ ಹರೇ’ ॥೧.೧೦೭॥

ಭಕ್ತರು ಮಾಡಿದ ಅಧರ್ಮವೆಲ್ಲವೂ ಆಗುತ್ತದೆ ಧರ್ಮ,
ಭಕ್ತರಲ್ಲದವರು ಮಾಡಿದ ಧರ್ಮವೆಲ್ಲವೂ ಅದು ಅಧರ್ಮ,
ಧರ್ಮದ ಕೇಂದ್ರ ಬಿಂದು ಅವ ಮಾಮನೋಹರ,
ಅವನ ವಿರುದ್ಧದ ನಡೆಯೆಲ್ಲವೂ ಧರ್ಮಬಾಹಿರ.

ಭಕ್ತ್ಯಾ ತ್ವನನ್ಯಯಾ ಶಕ್ಯ ಅಹಮೇವಂವಿಧೋsರ್ಜುನ ।
ಜ್ಞಾತುಂ ದ್ರಷ್ಟುಂ ಚ ತತ್ತ್ವೇನ ಪ್ರವೇಷ್ಟುಂ ಚ ಪರನ್ತಪ’ ॥೧.೧೦೮॥

ವಿಶ್ವರೂಪದರ್ಶನ ಕಾಲದಿ ಕೃಷ್ಣ ಅರ್ಜುನಗೆ ಹೇಳಿದ ಮಾತು,
ಅವನ ಅರಿವಿಗೆ ಅವನ ದರ್ಶನಕ್ಕೆ ಭಕ್ತಿಯೊಂದೇ ಹೇತು.

[Contributed by Shri Govind Magal]

No comments:

Post a Comment

ಗೋ-ಕುಲ Go-Kula