Saturday 12 August 2017

Śrī Rāghavēndra Stōtra Ślōkas- 5, 6, 7 ಶ್ರೀ ರಾಘವೇಂದ್ರ ಸ್ತೋತ್ರ - ಶ್ಲೋಕ ೫, ೬, ೭

ಶ್ಲೋಕ .

Ślōka 5.
ಭವ್ಯ-ಸ್ವರೂಪೋ ಭವ-ದುಃಖ-ತೂಲ
ಸಂಘಾಗ್ನಿ-ಚರ್ಯಃ ಸುಖ-ಧೈರ್ಯ-ಶಾಲೀ |
ಸಮಸ್ತ-ದುಷ್ಟ-ಗ್ರಹ-ನಿಗ್ರಹೇಶೋ
ದುರತ್ಯಯೋಪಪ್ಲವ-ಸಿಂಧು-ಸೇತುಃ ||||


भव्यस्वरूपो भवदुःखतूल
सङ्घाग्नि-चर्यः सुख-धैर्य-शाली
समस्त-दुष्ट-ग्रह-निग्रहेशो
दुरत्ययोपप्लव-सिन्धु-सेतुः ५॥



bhavya-svarūpō bhava-duḥkha-tūla
saṅghāgni-caryaḥ sukha-dhairya-śālī |
samasta-duṣṭa-graha-nigrahēśō
duratyayōpaplava-sindhu-sētuḥ ||5||

 
ಪದಚ್ಛೇದ:

ಭವ್ಯಸ್ವರೂಪಃ, ಭವ ದುಃಖ ತೂಲ ಸಂಘ ಅಗ್ನಿಚರ್ಯಃ, ಸುಖಧೈರ್ಯಶಾಲೀ, ಸಮಸ್ತ ದುಷ್ಟಗ್ರಹ ನಿಗ್ರಹ ಈಶಃ, ದುರತ್ಯಯ ಉಪಪ್ಲವಸಿಂಧು ಸೇತುಃ.

Padacchēda:

भव्यस्वरूपः(Bhavyasvarūpaḥ), भव(bhava), दुःख(duḥkha), तूल(tūla), संघ(saṅgha),  अग्निचर्यः(agnicaryaḥ), सुखधैर्यशाली(sukhadhairyaśālī), समस्त(samasta),  दुष्टग्रह(duṣṭagraha),  निग्र(duṣṭagraha), ईशः(īśaḥ), दुरत्यय(duratyaya), उपप्लवसिंधु(upaplavasindhu),  सेतुः(sētuḥ




ಶ್ಲೋಕ ೬
Ślōka 6.



ನಿರಸ್ತ-ದೋಷೋ ನಿರವದ್ಯ-ವೇಷಃ
ಪ್ರತ್ಯರ್ಥಿ-ಮೂಕತ್ವ-ನಿಧಾನ-ಭಾಷಃ  |
ವಿದ್ವತ್-ಪರಿಜ್ಞೇಯ-ಮಹಾ-ವಿಶೇಷೋ
ವಾಗ್-ವೈಖರೀ-ನಿರ್ಜಿತ-ಭವ್ಯ-ಶೇಷಃ ||||


निरस्त-दोषो निरवद्य-वेषः
प्रत्यर्थि-मूकत्त्व-निदान-भाषः
विद्वत् परिज्ञेय-महा-विशेषो
वाग्   वैखरी-निर्जित-भव्य-शेषः ६॥


nirasta-dōṣō niravadya-vēṣaḥ
pratyarthi-mūkatva-nidhāna-bhāṣaḥ |
vidvat-parijñēya-mahā-viśēṣō
vāg-vaikharī-nirjita-bhavya-śēṣaḥ ||6||

 
ಪದಚ್ಛೇದ:
ನಿರಸ್ತದೋಷಃ, ನಿರವದ್ಯವೇಷಃ, ಪ್ರತ್ಯರ್ಥಿಮೂಖತ್ವನಿಧಾನಭಾಷಃ, ವಿದ್ವತ್ಪರಿಜ್ಞೇಯಮಹಾವಿಶೇಷಃ,
ವಾಗ್ವೈಖರೀನಿರ್ಜಿತಭವ್ಯಶೇಷಃ.


Padacchēda:


निरस्तदोषः(Nirastadōṣaḥ) निरवद्यवेषः(niravadyavēṣaḥ)
प्रत्यर्थिमूकत्त्वनिदानभाषः(pratyarthimūkhatvanidhānabhāṣaḥ)
विद्वत्परिज्ञेयमहाविशेषः (vidvatparijñēyamahāviśēṣaḥ)
वाग्वैखरीनिर्जितभव्यशेषः(vāgvaikharīnirjitabhavyaśēṣaḥ)


ಶ್ಲೋಕ
Ślōka 7


ಸಂತಾನ-ಸಂಪತ್-ಪರಿಶುದ್ಧ-ಭಕ್ತಿ-
ನಿಜ್ಞಾನ-ವಾಗ್-ದೇಹ-ಸು-ಪಾಟವಾದೀನ್ |
ದತ್ವಾ ಶರೀರೋತ್ಥ-ಸಮಸ್ತ-ದೋಷಾನ್

ಹತ್ವಾ ನೋವ್ಯಾದ್ ಗುರು-ರಾಘವೇಂದ್ರಃ ||||

संतान-संपत् परिशुद्ध-भक्ति-
विज्ञान-वाग्-देह-सु-पाटवादीन्
दत्वा शरीरोत्थ-समस्त-दोषान्
हत्वा नोव्याद् गुरु-राघवेंद्रः ७॥

santāna-sampat-pariśud'dha-bhakti-
nijñāna-vāg-dēha-su-pāṭavādīn |
datvā śarīrōt'tha-samasta-dōṣān
hatvā sa nōvyād guru-rāghavēndraḥ ||7||

 
ಪದಚ್ಛೇದ:
ಸಂತಾನ, ಸಂಪತ್, ಪರಿಷುದ್ಧಭಕ್ತಿ, ವಿಜ್ಞಾನ, ವಾಕ್, ದೇಹಸುಪಾಟವ ಆದೀನ್, ದತ್ವಾ, ಶರೀರೋತ್ಥ ಸಮಸ್ತದೋಷಾನ್,
ಹತ್ವಾ, ಸಃ, ನಃ, ಅವ್ಯಾತ್, ಗುರು ರಾಘವೇಂದ್ರಃ. 


Padacchēda:

संतान(santāna), संपत्(sampat), परिशुद्धभक्ति(pariṣud'dhabhakti),विज्ञान(vijñāna), वाक्(vāk) देहसुपाटव(dēhasupāṭava) अदीन्(adīn) दत्त्वा(dat'tvā) शरीरोत्थ(śarīrōt'tha), समस्तदोषान्(samastadōṣān), हत्त्वा(hatvā) सः(saḥ), नः(naḥ), अव्यात्(avyāt), गुरु राघवेन्द्रः(guru
rāghavēndraḥ)

 
ಅನ್ವಯಾರ್ಥ - ಶ್ಲೋಕ ೫,,:
ಭವ್ಯ ಸ್ವರೂಪಃಮಂಗಳಮಯವಾದ ಸ್ವರೂಪ ಉಳ್ಳ, ಭವ ದುಃಖ-ಸಂಸಾರದ ದುಃಖವೆಂಬ, ತೂಲ ಸಂಘಹತ್ತಿಯ
ರಾಶಿಗೆ, ಅಗ್ನಿ ಚರ್ಯಃಬೆಂಕಿಯಂತಿರುವ (ಸುಟ್ಟುಬಿಡುವ) ಸುಖ ಧೈರ್ಯಶಾಲೀಆನಂದ ಮತ್ತು ಭಗವಂತನ
ಜ್ಞಾನದಿಂದ ಗಳಿಸಿದ ಧೈರ್ಯ ಉಳ್ಳ, ಸಮಸ್ತಎಲ್ಲ ರೀತಿಯ, ದುಷ್ಟಗ್ರಹಅಂತರಂಗ ಬಹಿರಂಗಗಳಲ್ಲಿ ನಮ್ಮನ್ನು ಹಿಡಿದು ಪೀಡಿಸುವ ಕಾಮವೇ ಮೊದಲಾದ ಷಡ್ವೈರಿಗಳು ಮತ್ತು ಹೊರಗಿನಿಂದ ಕಾಡುವ ವೇತಾಳ ಪಿಶಾಚಾದಿಗಳ, ನಿಗ್ರಹದಮನ ಮಾಡಲು, ಈಶಃಸಮರ್ಥರಾದ, ದುರತ್ಯಯದಾಟಲಶಕ್ಯವಾದ ದುಃಖಗಳ, ಉಪಪ್ಲವ ಸಿಂಧುಉಲ್ಲೋಲಕಲ್ಲೋಲವಾದ ಸಮುದ್ರಕ್ಕೆಸೇತುಃಸೇತುವೆಯಂತಿರುವ, ನಿರಸ್ತ ದೋಷಃತನ್ನಲ್ಲಿದ್ದ ಎಲ್ಲದೋಷಗಳನ್ನು
ನಿವಾರಿಸಿಕೊಂಡಂತಃ , ನಿರವದ್ಯವೇಷಃನಿರ್ಮಲವಾದ ಶುದ್ಧವಸ್ತ್ರ ಧರಿಸಿದ, ಪ್ರತ್ಯರ್ಥಿತತ್ತ್ವವಾದವನ್ನು ವಿರೋಧಿಸಿ ವಾದಮಾಡಲು ಬಂದ ಎದುರಾಳಿಗಳನ್ನು, ಮುಕತ್ವಮೂಕವಿಸ್ಮಿತರನ್ನಾಗಿಸುವ, ನಿಧಾನ ಭಾಷಃಯಾವುದೇ ಆವೇಗವಿಲ್ಲದೆ ನಿರಾಳವಾಗಿ ನಿಧಾನವಾಗಿ ಮಾತನಾಡುವ, ವಿದ್ವತ್ಜ್ಞಾನಿಗಳಿಗೆ ಮಾತ್ರ, ಪರಿಜ್ಞೇಯತಿಳಿಯಲು ಸಾಧ್ಯವಾದ, ಮಹಾವಿಶೇಷಃಮಹತ್ತರವಾದ ವಿಶೇಷಗುಣಗಳನ್ನುಳ್ಳ, ವಾಗ್ ವೈಖರೀ ನಿರ್ಜಿತಮಾತಿನ ವರಸೆಯಿಂದ ಸೋಲಿಸಲ್ಪಟ್ಟ, ಭವ್ಯಶೇಷಃಉಳಿದೆಲ್ಲಾ ವಿಶಿಷ್ಟರಾದ ಎದುರಾಳಿಗಳನ್ನುಳ್ಳ, (ತಮ್ಮ ಅದ್ಭುತವಾದ ವಾಕ್ ಚಾತುರ್ಯದಿಂದ ಸಾವಿರ ತಲೆಯ ಭವ್ಯರೂಪದ ಶೇಷದೇವರನ್ನೂ ತಲೆದೂಗುವಂತೆ ಮಾಡಿದ) ಸಃ ಶ್ರೀ ರಾಘವೇಂದ್ರಃಅಂತಃ ಶ್ರೀ ರಾಘವೇಂದ್ರರು,  ಶರೀರೋತ್ಥಶರೀರದಲ್ಲಿರುವ, ಸಮಸ್ತ ದೋಷಾನ್ಎಲ್ಲಾ ದೋಷಗಳನ್ನು,  ಹತ್ವಾ- ನಾಶಮಾಡಿ, ಸಂತಾನ- ಉತ್ತಮರಾದ ಮಕ್ಕಳು (ಪರಂಪರಾಗತ ಜ್ಞಾನವನ್ನು ಜಗತ್ತಿನಲ್ಲಿ ಹರಡುವ ಉತ್ತಮರಾದ ಶಿಷ್ಯರು) ಸಂಪತ್ಐಹಿಕ ಮತ್ತು ಪಾರಮಾರ್ಥಿಕ ಸಂಪತ್ತು,  ಪರಿಷುದ್ಧ ಭಕ್ತಿಯಾವುದೇ ಸ್ವಾರ್ಥವಿಲ್ಲದ ಶುದ್ಧವಾದ ಭಕ್ತಿ, ವಿಜ್ಞಾನಭಗವದ್ವಿಶಯೈಕವಾದ ಜ್ಞಾನ, ವಾಕ್ಉತ್ತಮವಾದ ಮಾತುಗಾರಿಕೆ, ದೇಹ ಸುಪಾಟವ ಆದೀನ್ಲಕ್ಷಣೋಪೇತವಾದ ಆರೋಗ್ಯಪೂರ್ಣ ದೃಢದೇಹ ಇವೇ ಮೊದಲಾದವುಗಳನ್ನು, ದತ್ವಾ- ಕೊಟ್ಟು, ನಃನಮ್ಮನ್ನು, ಅವ್ಯಾತ್ರಕ್ಷಿಸಲಿ.

Synonyms - Ślōkas 5,6,7:

भव्यस्वरूपः(Bhavyasvarūpaḥ)- posessing an auspicious form, भवदुःख(bhava duḥkha) – the
sorrow in worldly life, तूल संघ (tūla saṅgha) – cotton bale,  अग्निचर्यः(agnicaryaḥ) – fire-like(that which burns), सुखधैर्यशाली(sukhadhairyaśālī) – courage arising from bliss and knowledge of the Lord, समस्त(samasta) – in all manner, दुष्टग्रह(duṣṭagraha) – elements that torment us internally and externally such as the six foes like काम (Kāma i.e. desire) etc., and ghosts/ apparitions in the external world,  निग्रह(duṣṭagraha) – to extinguish, ईशः(īśaḥ) – capable ones, दुरत्यय(duratyaya) – unmitigable  sorrows, उपप्लव सिंधु(upaplava sindhu) – in a tumultuous sea,  सेतुः(sētuḥ) – bridgelike, निरस्तदोषः(Nirastadōṣaḥ) – one who has rid himself of all maladies, निरवद्यवेषः(niravadyavēṣaḥ) - attired in a pure and unstained vesture, प्रत्यर्थि(pratyarthi) – those who have come to oppose and debate the Tattva Vāda  मूकत्त्व(mūkhatva) – rendered speechless or dumbfounded, निदानभाषः(nidhānabhāṣaḥ) – of speech which is calming, unhurried and sans agitation, विद्वत्limited to the knowledgeable ones,  परिज्ञेय- comprehensible,  महाविशेषः (vidvatparijñēyamahāviśēṣaḥ) – comprising significantly special attributes, वाग् वैखरी निर्जित (vāgvaikharīnirjita) – prevailed over by the very manner of speech, भव्यशेषः(bhavyaśēṣaḥ) – comprising the residual exclusive opponents(by the sheer brilliance of his speech he got the thousand hooded Śēṣadēva(serpent deity) to nod), सः श्री राघवेन्द्रः(saḥ Śrī rāghavēndraḥ) – such a Śrī Rāghavēndra, शरीरोत्थ(śarīrōt'tha) – present in the body, समस्तदोषान्(samastadōṣān) – all malaises or woes, हत्वा(hat’vā) – terminated or destroyed,    संतान(santāna) – good children(good pupils who can disseminate traditional knowledge across the world), संपत्(sampat) -material and spiritual wealth, परिशुद्ध भक्ति(pariṣud'dha bhakti) – pure and unselfish devotion, विज्ञान(vijñāna) of knowledge that pertains to realm of God, वाक्(vāk) – good quality utterances, देह सुपाटव अदीन्(dēha supāṭava adīn) – pertaining to a well structured, healthy and firm body, दत्वा (dat’vā) - granted, नः(naḥ) - us, अव्यात्(avyāt) – may protect.

ತಾತ್ಪರ್ಯ - ಶ್ಲೋಕ ,,:

ರಾಘವೇಂದ್ರಸ್ವಾಮಿಗಳು ದೈವಾಂಶರಾದ ಮಂಗಳಮಯಸ್ವರೂಪದವರು, ಭವ ಎಂದರೆ ಸಂಸಾರ. ಭವ್ಯ ಅಂದರೆ ಸಂಸಾರಕ್ಕೆ ಸಂಬಂಧಪಟ್ಟ ಪಾಂಚಭೌತಿಕ ದೇಹ ಉಳ್ಳವರು. ಹಾಗಾಗಿ ಸಂಸಾರದಲ್ಲಿ ಮುಳುಗಿರುವ ನಮ್ಮ ಸಂಕಟಗಳನ್ನು ಬಲ್ಲವರು. ನಿರಂತರ ಸೇವೆಯಿಂದ ಭಗವಂತನ ಅನುಗ್ರಹ ಪಡೆದು ತಮ್ಮಲ್ಲಿದ್ದ ದೋಷಗಳನ್ನೆಲ್ಲಾ ಕಳೆದುಕೊಂಡವರು. ಹಾಗಾಗಿ ನಮ್ಮ ಸಾಂಸಾರಿಕ ದುಃಖವನ್ನು ಅಗ್ನಿಯು ಹತ್ತಿಯರಾಶಿಯನ್ನು ಸುಲಭವಾಗಿ ಸುಡುವಂತೆ ಸುಟ್ಟುಬಿಡಬಲ್ಲವರು. ಭಗವಂತನ ಅಪರೋಕ್ಷಜ್ಞಾನ ಉಳ್ಳವರಾದ್ದರಿಂದ ಸಾಂಸಾರಿಕ ದುಃಖಕ್ಕೆ ಹೆದರದೆ ಧೈರ್ಯದಿಂದ ಸುಖವಾಗಿರುವವರು. ನಮ್ಮನ್ನು ಒಳಗೂ ಹೊರಗೂ ಹಿಡಿದು ಕಾಡಿಸಿ ಪೀಡಿಸುವ ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಗಳೆಂಬ ಅಂತರಂಗದ ದುಷ್ಟ ಗ್ರಹಗಳನ್ನು ಮತ್ತು ಹೊರಗಿನ ಭೂತ ಪ್ರೇತ ಪಿಶಾಚಾದಿ ದುಷ್ಟ ಶಕ್ತಿಗಳನ್ನು ನಿಗ್ರಹಿಸುವುದರಲ್ಲಿ ಅತ್ಯಂತ ಸಮರ್ಥರು. ಒಂದು ಸೇತುವೆಯು ಉಕ್ಕಿಹರಿಯುವ ನದಿಯನ್ನು ಅಥವಾ ಪ್ರಕ್ಷುಬ್ಧವಾದ ಸಮುದ್ರವನ್ನು ನಿರಾಯಾಸವಾಗಿ ಹೇಗೆ ದಾಟಿಸುತ್ತದೆಯೋ ಹಾಗೆಯೇ ರಾಯರು ಕೂಡ ಸಂಸಾರದ ದುಃಖವೆಂಬ ಪ್ರಕ್ಷುದ್ಧವಾದ ಸಮುದ್ರವನ್ನು ದಾಟಲು ನಮಗೆ ಸೇತುವೆಯಂತಿರುವವರು. ಅಂದರೆ ರಾಯರ ಅನುಗ್ರಹದಿಂದ ನಮಗೂ ಭಗವಂತನ ಜ್ಞಾನ ಉಂಟಾಗಿ ಸಂಸಾರವೆಂಬ ಸಮುದ್ರವನ್ನು ದಾಟಿ ಭಗವಂತನನ್ನು ತಲುಪಬಲ್ಲೆವು. ರಾಯರು ಅತ್ಯಂತ ಶುಭ್ರವಾದ ವಸ್ತ್ರಗಳನ್ನುಟ್ಟವರು, ದೋಷರಹಿತವಾದ ಸ್ವರೂಪ ಉಳ್ಳವರು. ಅವರು ಮಾತನಾಡತೊಡಗಿದರೆ ಅವರ ನಿಧಾನವಾದ, ಅಸ್ಖಲಿತವಾದ, ಯಾವುದೇ ಉದ್ವೇಗವಿಲ್ಲದೆ ಸರಾಗವಾಗಿ ಮಾತನಾಡುವ ರೀತಿಗೆ ಎಂಥಾ ಎದುರಾಳಿ ಪ್ರತಿವಾದಿಯನ್ನಾದರೂ ಮೂಕವಿಸ್ಮಿತನನ್ನಾಗಿಸಿ ಮರುಮಾತಿಲ್ಲದೇ ಶರಣಾಗುವಂತೆ ಮಾಡುತ್ತಿದ್ದರು. 


ಶ್ಲೋಕದಲ್ಲಿ ರಾಯರು ತಮ್ಮ ವಾಕ್ ಚಾತುರ್ಯದಿಂದ ಸಾವಿರ ಮುಖದ ಶೇಷನನ್ನೂ ಕೂಡ ವಾದದಲ್ಲಿ ಸೋಲಿಸಿದವರು ಎಂದು ತೋರುವಂತಿದೆ. ಆದರೆ ವಾಸ್ತವವಾಗಿ ರಾಯರು ತಮಗಿಂತಲೂ ತಾರತಮ್ಯದಲ್ಲಿ ಅತ್ಯಂತ ಎತ್ತರದಲ್ಲಿರುವ ಶೇಷನನ್ನೂ ಸೋಲಿಸುವ ಪ್ರಸಕ್ತಿಯೇ ಇಲ್ಲ. ಮತ್ತು ಆಚಾರ್ಯಮಧ್ವರ ಪ್ರಮೇಯಗಳನ್ನು ಚೆನ್ನಾಗಿಬಲ್ಲ ಅಪ್ಪಣ್ಣಾಚಾರ್ಯರು ಹಾಗೆ ಹೇಳಿರಲೂ ಸಾಧ್ಯವಿಲ್ಲ. ಆದ್ದರಿಂದ ರಾಯರ ವಾಕ್ ಚಾತುರ್ಯದ ಮಹಿಮೆಯನ್ನು ತಿಳಿಸಲು ಪುರಾಣಗಳಲ್ಲಿನ ಅರ್ಥವಾದದಂತೆ ಅಪ್ಪಣಾಚಾರ್ಯರು ಇಲ್ಲಿ ಕೇವಲ ಅತಿಶಯೋಕ್ತಿ ಅಲಂಕಾರ ಬಳಸಿದ್ದಾರೆಂದೂ, ಮತ್ತು ರಾಯರ ವಾಕ್ ಚಾತುರ್ಯ ಸಾವಿರ ಮುಖದ ಶೇಷನೂ ಕೂಡ ತಲೆದೂಗುವಂತಿರುತ್ತಿತ್ತು ಎಂದಷ್ಟೇ ಅರ್ಥಮಾಡಿಕೊಳ್ಳಬೇಕು. 


ಒಂದುವೇಳೆ ರಾಯರ ಬಗೆಗಿನ ಹತ್ತು ಹಲವು ಕಥೆಗಳನ್ನು ಗ್ರಂಥಗಳನ್ನು ಓದಿ ಅವರ ಮಹಿಮೆಯನ್ನು ಪೂರ್ಣವಾಗಿ ತಿಳಿದಿಕೊಂಡುಬಿಡುತ್ತೇನೆ ಎಂದರೆ ಅಂಥವರಿಗಾಗಿಯೇ ಹೇಳುತ್ತಾರೆ, ರಾಯರು ಜ್ಞಾನಿಗಳಿಗೆ ಮಾತ್ರ ಗೋಚರವಾಗುವಂಥ ಮಹಾ ಮಹಿಮೆ ಯುಳ್ಳವರು. ಮತ್ತು ಸಾಮಾನ್ಯ ಮನುಷ್ಯರಿಂದ ಅವರ ಮಹಿಮೆಯನ್ನು ತಿಳಿಯಲು ಅಸಾಧ್ಯ ಎಂದು.

ಹೀಗೆ ಇಷ್ಟೆಲ್ಲಾ ಮಹಿಮಾಗುಣಸಂಪನ್ನರಾದ ರಾಯರು ನಮ್ಮ ಶರೀರಸ್ಥವಾದ ಎಲ್ಲಾ ದೋಷಗಳನ್ನು ನಾಶಮಾಡಿ, ಭಗವಂತನಬಗೆಗಿನ ಉತ್ತಮವಾದ ಜ್ಞಾವನ್ನೂ, ಐಹಿಕ ಮತ್ತು ಪಾರಮಾರ್ಥಿಕ ಸಂಪತ್ತನ್ನೂ, ಉತ್ತಮರಾದ ಮಕ್ಕಳನ್ನೂ, ಜ್ಞಾನ ಪರಂಪರೆಯನ್ನು ಉಳಿಸಿ ಬೆಳೆಸುವ ಉತ್ತಮ ಜ್ಞಾನಿಗಳಾದ ಶಿಷ್ಯರನ್ನೂ, ವಾಯುಸ್ತುತಿಯಲ್ಲಿ ತ್ರಿವಿಕ್ರಮಪಂಡಿತಾಚಾರ್ಯರು ಹೇಳುವಊರ್ಜಿತಾಂ ನಿರ್ನಿಮಿತ್ತಾಂ ನಿರ್ವ್ಯಾಜಾಂ ನಿಶ್ಚಲಾಂ ಸದ್ಗುಣಗಣ ಬೃಹತೀಂ ಶಾಶ್ಱತೀಂ ಭಕ್ತಿಂ


ಎಂದೆಂದಿಗೂ ಕರಗದೆ ಬೆಳೆಯುತ್ತಲೇ ಇರುವ, ಯಾವ ನೆಪಗಳೂ ಕಾರಣಗಳೂ ಇರದ, ಎಂಥಾ ಪರಿಸ್ಥಿತಿಯಲ್ಲಿಯೂ ಕದಲದಂಥಾ ಉತ್ತಮಗುಣಗಳಿಂದ ಕೂಡಿದ ಶಾಶ್ವತವಾದ ಪರಿಶುದ್ಧವಾದ ಭಕ್ತಿಯನ್ನು, ಉತ್ತಮ ವಾಕ್ ಪಟುತ್ವವನ್ನೂ, ಅರೋಗ್ಯಪೂರ್ಣವಾದ ದೇಹ ಸೌಷ್ಟವವೇ ಮೊದಲಾದವುಗಳನ್ನೂ ಕೊಟ್ಟು ರಾಯರು ನಮ್ಮನ್ನು ಸಂಸಾರದ ಭಯದಿಂದ ಕಾಪಾಡಲಿ ಎಂಬುದು ಮೂರು ಶ್ಲೋಕಗಳಲ್ಲಿ ಮಾಡಬೇಕಾದ ಅನುಸಂಧಾನ.


Tātparya - Ślōkas 5,6,7:
Rāghavēndraswāmi was divine natured and, auspicious in form; bhava means worldly, bhavya means possessing a body made from the five elements relating to this world. Which means, he is one who is fully conversant with the problems confronted by us i.e. those who are immersed in worldly life. He is one who has rid himself of all malaises through relentless service to the Lord. As such, just as a flame can burn down a cotton bale to ashes, he can easily burn away all our sins too. Being endowed with aparōkṣajñāna (God realisation), undaunted by worldly sorrows, he is courageously happy. He is fully capable of controlling the woeful conditions that grip all of us internally and externally like desire, anger, greed, delusion, ego and envy as also evil forces like ghosts, spirits and apparitions that might torment us. Just as a bridge helps us cross a flooded river or the rough seas without difficulty, similarly Rayaru too is like a bridge for us to cross over the agitated sea of worldly sorrows. In other words, with the grace of Rayaru, we too can attain God realisation and cross over this worldly sea to reach Him. Rayaru adorns extremely clean garments and has a form that is undistorted or bereft of woes. When he starts speaking, his unhurried, unagitated, crystal clear and smooth flowing style of speech leaves any opponent speechless and dumbstruck to the point of surrender.


In this ślōka it appears as though Rayaru had subdued the thousand faced Śēṣadēva in a verbal duel. However, in reality it was not possible for Rayaru to be engaged in defeating someone who was much higher placed than himself in the Tāratamya (hierarchical gradation of souls). It is also unlikely that Appaṇṇācārya who was well versed in Ācārya Madhva’s philosophy would have stated as such. Therefore, we should interpret this usage as a hyperbole to merely exemplify the brilliance of Rayaru’s speech and not as a misinterpreted view of the Purāṇas; suffices to view this such that Rayaru’s oratorial brilliance might even have won approbation from the thousand faced Śēṣadēva.


In a way, if one were to feel that it is possible to guage his powers by reading all those tens of mythical accounts about him in the books, there is an answer here for such people that Rayaru’s true personality or greatness can only be comprehended by knowledgeable people. And, it is impossible for ordinary folks to truly guage his greatness or powers.


In this way, endowed with such great powers, may Rayaru help destroy all woes that throng us embodied souls, guide us with the right knowledge to the path of God, grant us material and spiritual wealth, bless us with good progeny or good disciples who are knowledgeable and apply such knowledge plus assist in its global propagation; as stated by Trivikramapaṇḍitācāryaru in his Vāyustuti उर्जितां निर्निमित्तां निर्व्याजां निश्चलां सद्गुणगण बृहतीं शाश्वतीं भक्तिं (ūrjitāṁ nirnimittāṁ nirvyājāṁ niścalāṁ sadgugaṇa br̥hatīṁ śāśvatīṁ bhaktiṁ)” – grant me devotion that remains undilutedly accreting at all times, devoid of all ruses or excuses, unflagging under any circumstance, reflecting the best quality, eternal and pure; may Rayaru also grant us the highest competence in speech, a body that also has amongst other positive things, good health and grace and may he also protect us from fear in this world - this is what we need to resolve as we chant these ślōkas.
(Original by Śrī Krishna B R in Kannada, translation to English / Devanagari by Śrī Prasad B S)

No comments:

Post a Comment

ಗೋ-ಕುಲ Go-Kula