Wednesday 16 August 2017

Śrī Rāghavēndra Stōtra Ślōkas 24-25 ಶ್ರೀ ರಾಘವೇಂದ್ರ ಸ್ತೋತ್ರ ಶ್ಲೋಕ –೨೪.- ೨೫.

ಶ್ಲೋಕ ೨೪.
Ślōka – 24.
ಅಂಧೋಪಿ ದಿವ್ಯ-ದೃಷ್ಟಿಃ ಸ್ಯಾದೇಡ-ಮೂಕೋಪಿ ವಾಕ್-ಪತಿಃ |
ಪೂರ್ಣಾಯುಃ ಪೂರ್ಣ-ಸಂಪತ್ತಿಃ ಸ್ತೋತ್ರಸ್ಯಾಸ್ಯ ಜಪಾದ್ಭವೇತ್ ||೨೪||
अन्धोऽपि दिव्य-दृष्टिः स्यादेड-मूकोऽपि वाग्पतिः ।
पूर्णायुः पूर्ण-संपत्तिः स्तोत्रस्यास्य जपाद्भवेत् ॥२४॥
andhōpi divya-dr̥ṣṭi syādēḍa-mūkōpi vāk-pati |
pūrṇāyu pūra-sampatti stōtrasyāsya japādbhavēt ||24||
ಪದಚ್ಛೇದ:
ಅಂಧಃ, ಅಪಿ, ದಿವ್ಯದೃಷ್ಟಿಃ, ಸ್ಯಾತ್, ಏಡಮೂಕಃ, ಅಪಿ, ವಾಕ್ಪತಿಃ, ಪೂರ್ಣಾಯುಃ, ಪೂರ್ಣಸಂಪತ್ತಿಃ, ಸ್ತೋತ್ರಸ್ಯ, ಅಸ್ಯ, ಜಪಾತ್, ಭವೇತ್.
padacchēda:
अंधः(andha), अपि(api), दिव्यदृष्टिः(divyadr̥ṣṭi), स्यात्(syāt), एडमूकः(ēḍamūka), अपि(api), वाक्पतिः (vākpati), पूर्णायुः(pūrṇāyu), पूर्णसंपत्तिः(pūrasampatti), स्तोत्रस्य(stōtrasya), अस्य(asya), जपात्(japāt’), भवेत्(bhavēt).
ಅನ್ವಯಾರ್ಥ
ಅಸ್ಯ ಸ್ತೋತ್ರಸ್ಯ ಶ್ರೀರಾಘವೇಂದ್ರ ಸ್ತೋತ್ರದ, ಜಪಾತ್ ಜಪದಿಂದ, ಅಂಧಃ ಅಪಿ ಕುರುಡ ಕೂಡ, ದಿವ್ಯದೃಷ್ಟಿಃ ಉತ್ತಮವಾದ ಜ್ಞಾನ ದೃಷ್ಟಿ ಉಳ್ಳವನು, ಸ್ಯಾತ್ ಆದಾನು,
ಏಡ ಮೂಕಃ ಅಪಿ- ಕಿವುಡ ಮೂಕನು ಕೂಡ, ವಾಕ್ಪತಿಃ ಉತ್ತಮ ಮಾತುಗಾರರಲ್ಲೇ ಶ್ರೇಷ್ಠನು,
 ಪೂರ್ಣಾಯುಃ ಆರೋಗ್ಯಪೂರ್ಣವಾದ ದೀರ್ಘಾಯಸ್ಸು, ಪೂರ್ಣಸಂಪತ್ತಿಃ ಸಮೃದ್ಧವಾದ ಐಹಿಕ ಪಾರಮಾರ್ಥಿಕ ಸಂಪತ್ತು,   ಭವೇತ್ ಉಂಟಾದೀತು.
Synonyms:
अस्य स्तोत्रस्य(asya stōtrasya)- of this Śrī Rāghavēndra stōtra, जपात्(japāt’)- by chanting, अंधः(Andha) – visually challenged, अपि(api) - too, दिव्यदृष्टिः(divyadr̥ṣṭi) – visionary with supreme divine awareness, स्यात्(syāt) - becomes, एड मूकः अपि (ēḍamūka api) – hearing and speech challenged person too,  वाक्पतिः (vākpati) – the best among excellent speakers, पूर्णायुः(pūrṇāyu) – a healthy long life span, पूर्णसंपत्तिः(pūrasampatti) – bountiful material wealth,  भवेत्(bhavēt) - begets.

ಶ್ಲೋಕ ೨೫.
Ślōka – 25.

ಯಃ ಪಿಬೇಜ್ಜಲಮೇತೇನ ಸ್ತೋತ್ರೇಣೈವಾಭಿ-ಮಂತ್ರಿತಮ್ |
ತಸ್ಯ ಕುಕ್ಷಿ-ಗತಾ ದೋಷಾಃ     ಸರ್ವೇ ನಶ್ಯಂತಿ ತತ್-ಕ್ಷಣಾತ್ ||೨೫||
यः पिबेज्जलमेतेन स्तोत्रेणैवाभिमन्त्रितम् ।
तस्य कुक्षिगता दोषाः सर्वे नश्यन्ति तत्क्षणात् ॥ २५॥
ya pibējjalamētēna stōtrēṇaivābhi-mantritam |
tasya kuki-gatā dōṣāḥ sarvē naśyanti tat-kaṇāt ||25||
ಪದಚ್ಛೇದ:
ಯಃ, ಪಿಬೇತ್, ಜಲಮ್, ಏತೇನ, ಸ್ತೋತ್ರೇಣ, ಏವ, ಅಭಿಮಂತ್ರಿತಮ್, ತಸ್ಯ, ಕುಕ್ಷಿಗತಾಃ, ದೋಷಾಃ, ಸರ್ವೇ, ನಶ್ಯಂತಿ, ತತ್, ಕ್ಷಣಾತ್.
padacchēda:
यः(ya), पिबेत्(pibēt), जलम(jalam), एतेन(ētēna), स्तोत्रेण(stōtrēṇa), एव(ēva), अभिमन्त्रितम्(abhimantritam), तस्य(tasya), कुक्षिगतः(kukigatāḥ), दोषाः(dōṣāḥ), सर्वे(sarvē), नश्यन्ति(naśyanti), तत्(tat), क्षणात्(kaṇāt).

ಅನ್ವಯಾರ್ಥ:
ಯಃ ಯಾರು, ಏತೇನ ಸ್ತೋತ್ರೇಣ ರಾಘವೇಂದ್ರ ಸ್ತೋತ್ರದಿಂದ, ಅಭಿಮಂತ್ರಿತಂ ಅಭಿಮಂತ್ರಿಸಲ್ಪಟ್ಟ, ಜಲಂ ನೀರನ್ನು, ಪಿಬೇತ್ ಕುಡಿಯುತ್ತಾನೆ, ತಸ್ಯ- ಅವನ, ಸರ್ವೇ ಎಲ್ಲರೀತಿಯ, ಕುಕ್ಷಿಗತಾಃ ಹೊಟ್ಟೆಗೆ ಸಂಬಂಧಿಸಿದ, ದೋಷಾಃ- ತೊಂದರೆಗಳು, ತತ್ ಕ್ಷಣಾತ್ ಏವ ಕೂಡಲೇ, ನಶ್ಯಂತಿ ಪರಿಹಾರವಾಗುತ್ತವೆ

Synonyms:
यः(ya) – he who, एतेन स्तोत्रेण(ētēna stōtrēṇa) – from this Rāghavēndra stōtra, अभिमन्त्रितम्(abhimantritam) - sanctified, जलम(jalam) - water, पिबेत्(pibēt) - drinks, तस्य(tasya) - his, सर्वे(sarvē) – all types of, कुक्षिगतः(kukigatāḥ) – relating to the stomach, दोषाः(dōṣāḥ) – disorders or ailments, तत् क्षणात् एव, (tat kaṇāt ēva) – that very moment, नश्यन्ति(naśyanti) – rid of/ cured.

ತಾತ್ಪರ್ಯ- ಶ್ಲೋಕ ೨೪.೨೫:
ಸ್ತೋತ್ರದ ಪ್ರಭಾವದಿಂದ ಕುರುಡನೂ ಕೂಡ ಸತ್ಯವನ್ನು ಕಾಣಬಲ್ಲಂತಃ ದಿವ್ಯದೃಷ್ಟಿಯನ್ನು ಪಡೆಯುತ್ತಾನೆ. ಅಂದರೆ, ವಾಸ್ತವವಾಗಿ ನಾವೆಲ್ಲರೂ ಕುರುಡರೇ. ಪ್ರಕೃತಿಯು ಹರಡಿರುವ ಮಾಯೆ ಎಂಬ ಕತ್ತಲೆಯ ಗಾಢತೆ ಎಷ್ಟೆಂದರೆ ಕೋಟಿ ಸೂರ್ಯ ಸಮಪ್ರಭನಾದ ಭಗವಂತನೂ ಕಾಣದಷ್ಟುಹಾಗಾಗಿ ಬೆಳಕನ್ನು ಕೂಡ ಮರೆಮಾಡುವಷ್ಟು ಗಾಢವಾದ ಕತ್ತಲೆಯಿಂದ ಕುರುಡರಂತೆ ಬದುಕುತ್ತಿರುವ ನಮ್ಮನ್ನು ಬೆಳಕಿನೆಡೆಗೆ  ನಡೆಯುವಹಾಗೆ ಮಾಡಿ ಸತ್ಯ ಕಾಣುವಹಾಗೆ ನಮ್ಮ ದೃಷ್ಟಿಯನ್ನು ಸಶಕ್ತಗೊಳಿಸಲಿ ಎಂದು ಪ್ರಾರ್ಥನೆ ಇಲ್ಲಿದೆ. ಹಾಗೆಯೇ, ಮಾತಿನಲ್ಲಿ ಸಹಸ್ರ ಮುಖದ ಶೇಷನನ್ನೂ ಮೆಚ್ಚಿಸಿದ ರಾಯರ ಸ್ತೋತ್ರದ ಪ್ರಭಾವದಿಂದ ಕಿವುಡ ಮೂಕ ಕೂಡ ಒಳ್ಳೆಯ ಶ್ರವಣ ಶಕ್ತಿಯನ್ನು ಪಡೆದು ಉತ್ತಮ ಮಾತುಗಾರಿಕೆಯನ್ನು ಪಡೆಯಬಲ್ಲ
ನಾವು ಯಾವುದೇ ಧಾರ್ಮಿಕ ಕಾರ್ಯ ಮಾಡಾಬೇಕಾದರೂ ಕೂಡ ಅದಕ್ಕೆ ಮೊದಲು ಧರ್ಮ ಕಾರ್ಯ ಮಾಡುವ ಮನಸ್ಸಿರಬೇಕು. ಮತ್ತು ಅದಕ್ಕೇ ಬೇಕಾದ ಆರ್ಥಿಕ ಸಂಪತ್ತೂ ಬೇಕು. ನಂತರ ಯಾವುದು ಧರ್ಮ ಯಾವುದು ಅಧರ್ಮ ಎಂದು ತಿಳಿಯುವ ಶಕ್ತಿಬೇಕು. ಮತ್ತು ಇದೆಲ್ಲವನ್ನೂ ಮಾಡಲು ದೈಹಿಕ ಶಕ್ತಿ, ಉತ್ತಮ ಆರೋಗ್ಯ ಮತ್ತು ಸಮಯ ಎಲ್ಲವೂ ಬೇಕು. ಹಾಗಾಗಿ ಸ್ತೋತ್ರ ಪಠನ ಮಾಡಿದರೆ ಅದರ ಪ್ರಭಾವದಿಂದ ಪೂರ್ಣವಾದ ಐಹಿಕ ಮತ್ತು ಪಾರಮಾರ್ಥಿಕವಾದ ಜ್ಞಾನವೆಂಬ ಸಂಪತ್ತು ಮತ್ತು ರೋಗ ರುಜಿನೆಗಳ ಗೋಜಿಲ್ಲದ ಉತ್ತಮವಾದ ದೀರ್ಘ ಅಯಸ್ಸು ಸಿಗುತ್ತದೆ.
ಯಾರು ಸ್ತೋತ್ರದಿಂದ ಅಭಿಮಂತ್ರಿತವಾದ ನೀರನ್ನು ಕುಡಿಯುತ್ತಾನೋ ಅವನಿಗೆ ಹೊಟ್ಟೆಗೆ ಸಂಬಂಧಿಸಿದ ಎಲ್ಲ ರೀತಿಯ ತೊಂದರೆಗಳು ಕೂಡ ಕೂಡಲೇ ಪರಿಹಾರವಾಗುತ್ತವೆ
 ಅಂದರೆ ರಾಯರು ಇದನ್ನೆಲ್ಲ ನಮಗೆ ಅನುಗ್ರಹಿಸಲಿ ಎಂಬುದು ಶ್ಲೋಕಗಳ ಭಾವ.

Tātparya – Ślōkas 24 & 25:

This Ślōka has the power to make even a visually challenged person to gain divine vision that can make him see the truth. All of us are, by nature, visually challenged. The extent of darkness of Māyā that nature has enveloped us with, can be gauged from the fact that we are unable to see Bhagavan who is as bright as one hundred million suns. As such, it is prayed for here that may we, who lead lives as the visually impaired, be led from this pitch darkness unto the light of truth by empowering our eyes. In the same way, this power of this stōtra of Rayaru, whose speech impressed the thousand faced Śēṣa, can make a hearing and speech challenged person to acquire excellent listening powers, as also, become an exquisite speaker.

Even before we perform a righteous duty, we should possess a mind that supports our engagement in righteous tasks. Plus, we need to have the economic resources to meet these ends. We should also have the discriminatory power to differentiate between righteous and unrighteous deeds. Above all, to perform these, bodily strength backed by excellent health and time at our disposal, is required too. That being the case, reading/ chanting this stōtra, stimulates the necessary wholesome conditions around us for wealth in the form of material / spiritual knowledge, a disease/ trouble free, excellent and healthy, long span of life are also necessary.

Whosoever drinks water that is sanctified through this stōtra, will be cured of all problems/ ailments relating to the stomach.

In other words, may Rayaru grace us all these, is the intent of this ślōka.

(Original by Śrī Krishna B R in Kannada, translation to English / Devanagari by Śrī Prasad B S)

No comments:

Post a Comment

ಗೋ-ಕುಲ Go-Kula