Tuesday 15 August 2017

Śrī Rāghavēndra Stōtra Ślōkas 12-13-14 ಶ್ರೀ ರಾಘವೇಂದ್ರ ಸ್ತೋತ್ರ ಶ್ಲೋಕ ೧೨-೧೩-೧೪

ಶ್ಲೋಕ ೧೨.
Ślōka 12.

ಪ್ರತಿ-ವಾದಿ-ಜಯ-ಸ್ವಾಂತ- ಭೇದ-ಚಿಹ್ನಾದರೋ ಗುರುಃ |        
 ಸರ್ವ-ವಿದ್ಯಾ-ಪ್ರವೀಣೋನ್ಯೋ ರಾಘವೇಂದ್ರಾನ್ನ ವಿದ್ಯತೇ ||೧೨||
प्रति-वादि-जय-स्वान्त-भेद-चिह्नादरो गुरुः
सर्व-विद्या-प्रवीणोऽन्यो राघवेंद्रान्न  विद्यते ॥१२॥
prati-vādi-jaya-svānta- bhēda-cihnādarō guruḥ |
sarva-vidyā-pravīṇōn'yō rāghavēndrānna vidyatē ||12||
ಪದಚ್ಛೇದ:
ಪ್ರತಿವಾದಿಜಯ, ಸ್ವಾಂತ ಭೇದ ಚಿಹ್ನ ಆದರಃ, ಗುರುಃ, ಸರ್ವವಿದ್ಯಾಪ್ರವೀಣಃ, ಅನ್ಯಃ, ರಾಘವೇಂದ್ರಾತ್, , ವಿದ್ಯತೇ.
padacchēda:

प्रतिवादिजय(prativādijaya), स्वान्त (svānta), भेद(bhēda) चिह्नादरः(cihnādaraḥ), गुरुः(guruḥ), सर्वविद्याप्रवीणः(sarvavidyāpravīṇaḥ), अन्यः(an'yaḥ), राघवेंद्रात्(rāghavēndrāt), (na), विद्यते(vidyatē).

ಶ್ಲೋಕ ೧೩.
Ślōka 13.
ಅಪರೋಕ್ಷೀಕೃತ-ಶ್ರೀಶಃ ಸಮುಪೇಕ್ಷಿತ-ಭಾವಜಃ |   
ಅಪೇಕ್ಷಿತ-ಪ್ರದಾತಾನ್ಯೋ ರಾಘವೇಂದ್ರಾನ್ನ ವಿದ್ಯತೇ ||೧೩||
अपरोक्षीकृत-श्रीशः समुपेक्षित-भावजः
अपेक्षित-प्रदाताऽन्यो राघवेंद्रान्न  विद्यते ॥१३॥
Aparōkṣīkr̥ta-śrīśaḥ samupēkṣita-bhāvajaḥ |
apēkṣita-pradātān'yō rāghavēndrānna vidyatē ||13||

ಪದಚ್ಛೇದ:
ಅಪರೋಕ್ಷೀಕೃತಶ್ರೀಶಃ, ಸಮುಪೇಕ್ಷಿತಭಾವಜಃ,        ಅಪೇಕ್ಷಿತಪ್ರದಾತಾ, ಅನ್ಯಃ, ರಾಘವೇಂದ್ರಾತ್, , ವಿದ್ಯತೇ.
padacchēda:
अपरोक्षीकृतश्रीशः(aparōkṣīkr̥taśrīśaḥ), समुपेक्षितभावजः(samupēkṣitabhāvajaḥ), अपेक्षित-प्रदाता(apēkṣitapradātā), अन्यः(an'yaḥ), राघवेंद्रात्(rāghavēndrāt), (na), विद्यते(vidyatē).

ಶ್ಲೋಕ ೧೪.
Ślōka 14.
ದಯಾ-ದಾಕ್ಷಿಣ್ಯ-ವೈರಾಗ್ಯ-ವಾಕ್-ಪಾಟವ-ಮುಖಾಂಕಿತಃ|
ಶಾಪಾನುಗ್ರಹ-ಶಕ್ತೋನ್ಯೋ ರಾಘವೇಂದ್ರಾನ್ನ ವಿದ್ಯತೇ ||೧೪||
दया-दाक्षिण्य-वैराग्य-वाक्-पाटव-मुखाङ्कितः
शापानुग्रह-शक्तोऽन्यो राघवेंद्रान्न  विद्यते ॥१४॥
dayā-dākṣiṇya-vairāgya-vāk-pāṭava-mukhāṅkitaḥ|
śāpānugraha-śaktōn'yō rāghavēndrānna vidyatē ||14||

ಪದಚ್ಛೇದ:
ದಯಾ ದಾಕ್ಷಿಣ್ಯವೈರಾಗ್ಯವಾಕ್ಪಾಟವಮುಖಾಂಕಿತಃ, ಶಾಪಾನುಗ್ರಹಶಕ್ತಃ, ಅನ್ಯಃ, ರಾಘವೇಂದ್ರಾತ್, , ವಿದ್ಯತೇ,

padacchēda:
दयादाक्षिण्यवैराग्यवाक्पाटवमुखाङ्कितः(dayādākṣiṇyavairāgyavākpāṭavamukhāṅkitaḥ), शापानुग्रहशक्तः(śāpānugrahaśaktaḥ), अन्यः(an'yaḥ), राघवेंद्रात्(rāghavēndrāt), (na), विद्यते(vidyatē).

ಅನ್ವಯಾರ್ಥ: ಶ್ಲೋಕ-೧೨,೧೩,೧೪.
ಗುರುಃ- ಗುರುಗಳಾದ ರಾಘವೇಂದ್ರರು, ಪ್ರತಿವಾದಿಜಯ- ಪ್ರತಿವಾದಿಆಚಾರ್ಯರಮಧ್ವರ ಸತ್ ಸಿದ್ಧಾಂತಕ್ಕೆ ವಿರುದ್ಧವಾಗಿ ವಾದಿಸುವವರನ್ನು, ಜಯಜಯಿಸುವುದರಲ್ಲಿ, ಸ್ವಾಂತ ಭೇದ ಚಿಹ್ನಸೋಲಿನಿಂದ ಮನಸ್ಸು ಒಡೆದು ಸೇಡಿನ ಭಾವ ಉಳ್ಳವರಲ್ಲಿ ಕೂಡ, ಆದರಃಪ್ರೀತಿ ಉಳ್ಳವರು. ಸರ್ವವಿದ್ಯಾಪ್ರವೀಣಃಸರ್ವವಿದ್ಯಾ- ಎಲ್ಲಾ ವಿದ್ಯೆಗಳಲ್ಲಿ, ಪ್ರವೀಣಃಪಾರಂಗತರಾದವರುಅಪರೋಕ್ಷೀಕೃತಶ್ರೀಶಃ, - ಅಪರೋಕ್ಷೀಕೃತಸಾಕ್ಷಾತ್ಕರಿಸಿಕೊಳ್ಳಲ್ಪಟ್ಟ, ಶ್ರೀಶಃಲಕ್ಷ್ಮೀಪತಿಯಾದ ಭಗವಂತನನ್ನು ಉಳ್ಳವರು, ಸಮುಪೇಕ್ಷಿತಭಾವಜಃ, ಸಂ ಉಪೇಕ್ಷಿತಚೆನ್ನಾಗಿ ನಿರ್ಲಕ್ಷಿಸಲ್ಪಟ್ಟ, ಭಾವಜಃಮನಸ್ಸಿನಲ್ಲಿ ಹುಟ್ಟುವಂತಃ ಕಾಮ ಕ್ರೋಧಾದಿಗಳನ್ನುಳ್ಳವರು,      ಅಪೇಕ್ಷಿತಪ್ರದಾತಾಬಯಸಿದ್ದನ್ನೆಲ್ಲಾ ಕೊಡುವಂಥವರು
ದಯಾ ದಾಕ್ಷಿಣ್ಯವೈರಾಗ್ಯವಾಕ್ಪಾಟವಮುಖಾಂಕಿತಃ, - ದಯಾ- ಸರ್ವಭೂತಗಳಲ್ಲಿ ಕರುಣೆ/ದಯೆ ಉಳ್ಳವರು, ದಾಕ್ಷಿಣ್ಯಇನ್ನೊಬ್ಬರಿಗೆ ತೊಂದರೆಕೊಡಲು ನಾಚುವವರು, ವೈರಾಗ್ಯ- ರಾಗ ದ್ವೇಶಗಳನ್ನೆಲ್ಲ ತೊರೆದ ವಿರಕ್ತರು, ವಾಕ್ ಪಾಟವ ಮುಖಾಂಕಿತಃಒಳ್ಳೆಯ ಮಾತುಗಳನ್ನಾಡುವ ಚಾತುರ್ಯ ಇವೇ ಮೊದಲಾದ ಗುಣಗಳುಳ್ಳವರು,   ಶಾಪಾನುಗ್ರಹಶಕ್ತಃ, - ಶಾಪದುರ್ಜನರನ್ನು ಶಪಿಸಿ ನಾಶಮಾಡಲು, ಅನುಗ್ರಹ- ಸಜ್ಜನರನ್ನು ಅನುಗ್ರಹಿಸಿ ಉದ್ದಾರ ಮಾಡಲು, ಶಕ್ತಃಸಮರ್ಥರಾದವರು,   ರಾಘವೇಂದ್ರಾತ್ ಅನ್ಯಃ- ರಾಘವೇದ್ರರಿಗಿಂತ ಬೇರೆಯವರು, ವಿದ್ಯತೇ- ಸಿಗುವುದಿಲ್ಲ.  

Synonyms Ślōkas 12, 13, 14:

गुरुः(guruḥ): Śrī Rāghavēndraru, the guru,  प्रतिवादिजय(prativādijaya)प्रतिवादि(prativādi) – opponents of the sat’siddhanta of Ācārya Madhva, जय(jaya) – in winning over, स्वान्त भेद चिह्न(svānta bhēda cihna) – even in those who are vengeful in their minds following their defeat, रः(adaraḥ) – possessing love, सर्वविद्याप्रवीणः(sarvavidyāpravīṇaḥ) – सर्वविद्या(sarvavidyā) – in all branches of knowledge, प्रवीणः(pravīṇaḥ) – an expert,  अपरोक्षीकृतश्रीशः(aparōkṣīkr̥taśrīśaḥ) - अपरोक्षीकृतaparōkṣīkr̥ta – realised, श्रीशःśrīśaḥ - possessing Lakṣmīpati i.e., the Lord,  समुपेक्षितभावजः(samupēkṣitabhāvajaḥ)सं उपेक्षित(saṁ upēkṣita) – supremely indifferent, भावजःbhāvajaḥ - those who are filled with desire, anger etc., like sentiments that are born in the mind, अपेक्षितप्रदाता(apēkṣitapradātā) – grants everything that is desired, दयादाक्षिण्यवैराग्यवाक्पाटवमुखाङ्कितः(dayādākṣiṇyavairāgyavākpāṭavamukhāṅkitaḥ)दयाdayā –compassionate with all living beings, दाक्षिण्य(dākṣiṇya) – shies away from inconveniencing others, वैराग्य(vairāgya) – detached from contempt and desire, वाक् पाटव मुखाङ्कितः (vāk’ pāṭava mukhāṅkitaḥ)skilled with attributes like good speech amongst others,  शापानुग्रहशक्तः(शापाśāpānugrahaśaktaḥ) – शाप(śāpa) – imprecate to destroy the evil doers, अनुग्रह(anugraha) – graces as the benefactor for good people, शक्तः(śaktaḥ) – empowered, राघवेंद्रात् अन्यः(rāghavēndrāt an'yaḥ) – apart from Rāghavēndraru, विद्यते(na vidyatē) – cannot get.

೧೨,೧೩, ಮತ್ತು ೧೪ನೇ ಶ್ಲೋಕಗಳ ತಾತ್ಪರ್ಯ:
ರಾಯರ ವಿಶೇಷವೆಂದರೆ ಯಾರು ಅವರ ಹತ್ತಿರ ಜಿಜ್ಞಾಸುಗಳಾಗಿ ಅವರನ್ನು ಶರಣುಬರುತ್ತಿದ್ದರೋ ಅವರ ಎಲ್ಲಾ ಗೊಂದಲಗಳನ್ನು ಪರಿಹರಿಸಿ ಅವರಿಗೆ ಸುಜ್ಞಾನ ಕೊಡುತ್ತಿದ್ದರು. ಆದರೆ, ಯಾರು ಅವರನ್ನು ಪರೀಕ್ಷಿಸಲು ಅಥವಾ ತತ್ತ್ವವಾದವನ್ನು ಖಂಡಿಸುವ ಉದ್ದೇಶದಿಂದ ಪಾಂಡಿತ್ಯ ಪ್ರದರ್ಶನಕ್ಕೆ ಬರುತ್ತಿದ್ದರೋ ಅವರನ್ನು ಬಾಯಿಕಟ್ಟಿಸಿ, ಅವರ ಮನದಲ್ಲಿ ಗೊಂದಲ ಮೂಡಿಸಿ ಬಿಡುತ್ತಿದ್ದರು. ಮತ್ತು ಒಡೆದ ಮನಸ್ಸಿನಿಂದ ದ್ವೇಶದ ಲಕ್ಷಣ ಉಳ್ಳವರನ್ನು ಕೂಡ ಪ್ರೀತಿಸುತ್ತಿದ್ದರು. ಅಂದರೆ, ರಾಯರು ವಾದಮಾಡುವಾಗ ದುರ್ವಾದಿಗಳ ಬಾಯಿಕಟ್ಟುವಂತೆ ಪ್ರಯೋಗಿಸುತ್ತಿದ್ದ ಪ್ರಬಲ ತರ್ಕಗಳಾಗಲಿ, ತೋರುತ್ತಿದ್ದ ಕಾಠಿಣ್ಯವಾಗಲೀ ಎಲ್ಲವೂ ಕೂಡ ಆಚಾರ್ಯಮಧ್ವರ ಸತ್ ಸಿದ್ಧಾಂತವನ್ನು ಪ್ರತಿಪಾದಿಸಿ ಸಿದ್ಧಾಂತವನ್ನು ಸ್ಥಾಪಿಸುವುದಕ್ಕಾಗಿಯೇ ಹೊರತು ಪ್ರತಿವಾದಿಗಳ ಮೇಲೆ ದ್ವೇಶದಿಂದಲ್ಲ. ಹಾಗಾಗಿಯೇ ವಾದದಲ್ಲಿ ಸೋತು ತಮ್ಮಲ್ಲಿ ದ್ವೇಶಭಾವ ಹೊಂದಿದವರಮೇಲೆ ಕೂಡ ಪ್ರೀತಿಯನ್ನು ತೋರಿಸುತ್ತಿದ್ದರು
ಹೀಗೆ ದ್ವೇಶಿಸುವವರಲ್ಲಿಯೂ ಪ್ರೀತಿ ತೋರಿಸುವ, ಎಲಾ ವಿದ್ಯೆಗಳಲ್ಲಿಯೂ ಪಾರಂಗತರಾದ, ಸತತ ಧ್ಯಾನ ಆರಾಧನೆಗಳಿಂದ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡ, ಮನಸ್ಸಿನಲ್ಲಿ ಹುಟ್ಟುವ ಕಾಮ ಕ್ರೋಧಗಳು ಮತ್ತು ಅವುಗಳ ಮೂಲದಿಂದ ಹುಟ್ಟುವ ಎಲ್ಲರೀತಿಯ ವಿಕಾರಗಳನ್ನೂ ಜ್ಞಾನಪೂರ್ವಕವಾಗಿ ನಿರ್ಲಕ್ಷಿಸಿದಂಥ, ಭಕ್ತರು ಬಯಸಿದ್ದನ್ನೆಲ್ಲಾ ಕೊಡಬಲ್ಲ, ಸಕಲ ಚರಾಚರ ಪ್ರಾಣಿಗಳಲ್ಲಿ ದಯೆ ಕರುಣೆ ಉಳ್ಳ, ಮತ್ತೊಬ್ಬರಿಗೆ ತೊಂದರೆಕೊಡಲು ನಾಚುವ ಮತ್ತು ಮತ್ತೊಬ್ಬರಿಗೆ ಸಹಾಯಮಾಡಲು ಹಿಂಜರಿಯದ, ಎಂಥಾ ಜ್ಞಾನ ತಪಃಶಕ್ತಿ ಇದ್ದರೂ, ಬೊಕ್ಕಸದ ಸಂಪತ್ತನ್ನೆಲ್ಲಾ ಕಾಲಬುಡದಲ್ಲಿ ಸುರಿಯುವ ರಾಜಧಿರಾಜರೇ ಪಾದಸೇವಕರಾಗಿದ್ದರೂ ಕೂಡ ಯಾವುದನ್ನೂ ಅಂಟಿಸಿಕೊಳ್ಳದ, ಉತ್ತಮ ವಾಕ್ ಚಾತುರ್ಯ ಮೊದಲಾದ ಮಹಾ ಗುಣಸಂಪನ್ನರಾದ, ದುಷ್ಟರನ್ನು ಸಂಕಲ್ಪಮಾತ್ರದಿಂದಲೇ ಶಮಾಡಬಲ್ಲ, ಸಜ್ಜನರನ್ನು ಅನುಗ್ರಹಿಸಿ ಉದ್ದಾರ ಮಾಡಬಲ್ಲ ರಾಘವೇಂದ್ರಸ್ವಾಮಿಗಳಂಥ ಸಾಮರ್ಥ್ಯಶಾಲಿಗಳು ಮತ್ತೊಬ್ಬರು ಸಿಗುವುದಿಲ್ಲ. ಆದರಿಂದ ಅಂತಃ ಗುರುಗಳನ್ನು ಬಿಟ್ಟರೆ ನಮ್ಮನ್ನು ಉದ್ದಾರ ಮಾಡಬಲ್ಲ ಸಮರ್ಥರು ಮತ್ತೊಬ್ಬರಿಲ್ಲ ಎಂಬುದು ಶ್ಲೋಕಗಳ ಭಾವ.

Tātparya for Ślōkas 12, 13 and 14:

The thing that's special about Rāyaru was that those who sought him out and sought refuge in him, had the disorder in their lives resolved and were granted rightful knowledge. However, if someone merely wanted to test him or exhibit false scholarship merely to denounce Tattva Vāda, such a person would be left speechless and confused. Further, he would treat with love even those who had become vengeful with hatred carried in their hearts. In other words, Rāyaru’s eloquence was intricately woven in Ācārya Madhva’s sat’siddhanta and contained incontrovertible premise and logic that silenced his opponents convincingly. The effort was to establish truth based on well-founded and set principles; not merely score brownie points or foster hatred amongst opponents. As such, he would treat with love even those who were vanquished in the debates and were vengeful towards him.


In this way, he who would show love to even those who hated him, he had mastered all branches of knowledge, he who had God realization through constant meditation and worship, he who was detached through full awareness, from evil traits that take root in the mind anger, desire etc and all distortions thereof, he that grants everything that a devotee seeks from him, he who is compassionate towards all moving and non-moving living beings, he who would shy away from inconveniencing others and unhesitatingly rise to help others, he who would not be attached to those who are howsoever powerful in terms of knowledge or tapas shakti(powers begotten from penance etc) or those like kings who might try to attract his attention by emptying all their coffers, he who is brilliant in speech amongst other such noble traits, he who can through mere resolution extinguish evil doers, grace his benefaction on good people, such a one, as capable as our  Rāghavēndraswami, cannot be seen in anyone else. This ślōka’s purport is that there is none like guru Rāghavēndraru that can capably lead us to progress.
(Original by Śrī Krishna B R in Kannada, translation to English / Devanagari by Śrī Prasad B S)

No comments:

Post a Comment

ಗೋ-ಕುಲ Go-Kula