Saturday 12 August 2017

Śrī Rāghavēndra Stōtra Ślōka 9 ಶ್ರೀ ರಾಘವೇಂದ್ರ ಸ್ತೋತ್ರ ಶ್ಲೋಕ ೯

ಶ್ಲೋಕ .
Ślōka 9.

ಯತ್ಪಾದಕಂಜರಜಸಾ ಪರಿಭೂಷಿತಾಂಗಾ
ಯತ್ಪಾದಪದ್ಮಮಧುಪಾಯಿತಮಾನಸಾಯೇ |
ಯತ್ಪಾದಪದ್ಮಪರಿಕೀರ್ತನಜೀರ್ಣವಾಚಃ
ತದ್ದರ್ಶನಂ ದುರಿತಕಾನನದಾವಭೂತಮ್ ||||

यत्पादकंजरजसा परिभूषितांगा
यत्पादपद्ममधुपायितमानसाये
यत्पादपद्मपरिकीर्तनजीर्णवाचः
तद्दर्शनं दुरितकाननदावभूतम् ॥९॥

yatpādakan̄jarajasā paribhūṣitāṅgā
yatpādapadmamadhupāyitamānasāyē |
yatpādapadmaparikīrtanajīrṇavācaḥ
taddarśanaṁ duritakānanadāvabhūtam ||9||

ಪದಚ್ಛೇದ:
ಯತ್, ಪಾದಕಂಜರಜಸಾ, ಪರಿಭೂಷಿತಾಂಗಾಃ, ಯತ್, ಪಾದಪದ್ಮ ಮಧುಪಾಯಿತ, ಮಾನಸಾಃ ಯೇ, ಯತ್, ಪಾದಪದ್ಮಪರಿಕೀರ್ತನ ಜೀರ್ಣವಾಚಃ, ತದ್ದರ್ಶನಂ, ದುರಿತಕಾನನದಾವಭೂತಮ್.
padacchēda:

यत्(yat), पादकंजरजसा(pādakan̄jarajasā), परिभूषितांगाः(paribhūṣitāṅgāḥ), यत्(yat), पादपद्म(pādapadma) मधुपायित(madhupāyita), मानसः ये (mānasāḥ yē), यत्(yat), पादपद्मपरिकीर्तन जीर्णवाचः(pādapadmaparikīrtana jīrṇavācaḥ), तद्दर्शनं(taddarśanaṁ), दुरितकाननदावभूतम् (duritakānanadāvabhūtam).

ಅನ್ವಯಾರ್ಥ:
ಯೇಯಾರು, ಯತ್ಯಾವ ಶ್ರೀರಾಘವೇಂದ್ರರ, ಪಾದಕಂಜರಜಸಾಪಾದ ಕಮಲಗಳ ಧೂಳಿನಿಂದ, (ಮೃತ್ತಿಕೆ) ಪರಿಭೂಷಿತ ಅಂಗಾಃಅಲಂಕರಿಸಲ್ಪಟ್ಟ ಅಂಗಾಂಗ ಹೊಂದಿದ್ದಾರೆಯೋ, ಯತ್ ಪಾದಪದ್ಮಯಾವ ಶ್ರೀರಾಘವೇಂದ್ರರ ಪಾದಕಮಲಗಳ (ಕಮಲಗಳಿಗೆ) ಮಧುಪಾಯಿತ -ದುಂಬಿಯಂತಿರುವ, ಮಾನಸಾಃಮನಸ್ಸು ಹೊಂದಿದ್ದಾರೆಯೋ, ಯತ್ ಪಾದಪದ್ಮ - ಯಾವ ಶ್ರೀರಾಘವೇಂದ್ರರ ಪಾದಕಮಲಗಳ, ಪರಿಕೀರ್ತನಸ್ತುತಿ ಮಾಡುವುದರಲ್ಲಿಯೇ, ಜೀರ್ಣ ವಾಚಃಮಾತುಗಳನ್ನು ಮುಗಿಸಿದ್ದಾರೆಯೋತತ್ಅಂತಃ ಭಕ್ತರ, ದರ್ಶನಂದರುಶನವು, ದುರಿತ ಕಾನನಕಷ್ಟಗಳೆಂಬ ಕಾಡಿಗೆ, ದಾವಭೂತಂಕಾಳ್ಗಿಚ್ಚಿನ ಹಾಗಿದೆ

Synonyms:
ये(yē) -who, यत्(yat) – that Śrī Rāghavēndra, पादकंजरजसा(pādakan̄jarajasā) – from the dust on the lotus feet of, परिभूषि अंगाः(paribhūṣita aṅgāḥ) – possessing limbs that are decorated, यत् पादपद्म(yat pādapadma) -  that Śrī Rāghavēndra whose lotus feet(to the lotus feet), मधुपायित(madhupāyita) – bee like, मानसाः(mānasāḥ) – possesses such a mind, यत् पादपद्म(yat pādapadma) – Śrī Rāghavēndra’s lotus feet, परिकीर्तन(parikīrtana) – in eulogising,  जीर्ण वाचः(jīrṇa vācaḥ) – finished stating, तत्(tat’) – such devotees, दर्शनं(darśanaṁ) – sighting of , दुरितकानन (duritakānana) – difficulties that loom like a forest,  दावभूतम् (dāvabhūtam)like a wildfire.

ತಾತ್ಪರ್ಯ:
ಶ್ಲೋಕದಲ್ಲಿ ರಾಯರ ಪಾದಸೇವಕರಾದ ಭಕ್ತರ ಮಹಿಮೆಯ ಬಗ್ಗೆ ಹೇಳಲಾಗಿದೆ.
ನಮ್ಮ ಕಷ್ಟಗಳನ್ನು ಪರಿಹರಿಸಲು ಸ್ವತಃ ರಾಯರೇ ಬರಬೇಕಾಗಿಲ್ಲ. ಬದಲಿಗೆ ಅವರ ಪಾದಧೂಳಿಯನ್ನಾಶ್ರಯಿಸಿದ ಭಕ್ತರ ದೃಷ್ಟಿ ಕೂಡ ನಮ್ಮ ಕಷ್ಟಗಳನ್ನು ಪರಿಹರಿಸಲು ಸಮರ್ಥವಾಗಿದೆ.
ಅಂತೆಯೇ, ಯಾವ ಭಕ್ತರು ಶ್ರೀ ರಾಘವೇಂದ್ರ ಸ್ವಾಮಿಗಳ ಪಾದಧೂಳಿ ರೂಪವಾದ ಮೃತ್ತಿಕೆಯನ್ನು ಮೈಗೆ ಲೇಪಿಸಿಕೊಳ್ಳುತ್ತಾರೆಯೋ, ಯಾರು ಕೆಲಸಕ್ಕೆ ಬಾರದ ಅನವಶ್ಯಕ ಮಾತುಗಳೆಲ್ಲವನ್ನೂ ಬಿಟ್ಟು ತಮ್ಮ ಮಾತುಗಳೆಲ್ಲವನ್ನೂ ರಾಯರ ಪಾದಕಮಲಗಳ ಗುಣಗಾನಕ್ಕಾಗಿಯೇ ಮೀಸಲಿಟ್ಟಿದ್ದಾರೆಯೋ, ಯಾರು ಕಮಲದ ಮಕರಂದಹೀರಿದ ದುಂಬಿಯ ಹಾಗೆ ತಮ್ಮ ಮನಸ್ಸನ್ನು ಸದಾ ರಾಯರ ಪಾದಸ್ಮರಣೆಯಲ್ಲಿಯೇ  ನೆಟ್ಟಿರುತ್ತಾರೆಯೋ ಅಂತಃ ಭಕ್ತರ ದರುಶನವು ಕೂಡ ಹೇಗೆ ಕಾಳ್ಗಿಚ್ಚು ದೊಡ್ಡ ದೊಡ್ಡ ಗೋಂಡಾರಣ್ಯಗಳನ್ನು ಕೂಡ ಸುಟ್ಟುಬಿಡುತ್ತದೆಯೋ ಹಾಗೆ ನಮ್ಮೆಲ್ಲ ಕಷ್ಟಗಳನ್ನು ಕೂಡ ಸುಟ್ಟುಬಿಡಬಲ್ಲುದು ಎಂದು ಶ್ಲೋಕದಲ್ಲಿ ತಿಳಿಸಿದ್ದಾರೆ
ನಾವು ಬೆಂಕಿಯನ್ನು ಮುಟ್ಟಿದರೂ, ಬೆಂಕಿ ನಮ್ಮನ್ನು ತಾಗಿದರೂ ಹೇಗೆ ನಮ್ಮ ಶರೀರವೇ ಸುಡುತ್ತದೆಯೋ ಹಾಗೆ ನಾವು ಭಕ್ತರನ್ನು ನೋಡಿದರೂ ಅಥವಾ ಅವರೇ ನಮ್ಮನ್ನೂ ನೋಡಿದರೂ ಕೂಡ ಸುಡುವುದು ನಮ್ಮ ಪಾಪಗಳೇ ಹೊರತು ಅವರನು ನಮ್ಮ ಪಾಪಗಳು ತಟ್ಟಲಾರವು.
ವಿಶೇಷವಾಗಿ ಕಮಲದ ಮಕರಂದ ಹೀರಿದ ದುಂಬಿಯ ಉದಾಹರಣೆ ಏಕೆ ಎಂದರೆ, ಕಾವ್ಯಲೋಕದ ನಂಬಿಕೆಯಂತೆ ಒಮ್ಮೆ ಒಂದು ದುಂಬಿ ಕಮಲದ ಮಕರಂದವನ್ನು ಹೀರಿದರೆ ಬೇರಿನ್ನಾವ ಹೂವಿನ ಮಕರಂದವೂ ಅದಕ್ಕೆ ರುಚಿಸುವುದಿಲ್ಲ. ಒಂದುವೇಳೆ ಕಮಲದ ಮಕರಂದ ಸಿಗದಿದ್ದರೆ ಉಪವಾಸವಿದ್ದು ತನ್ನ ಪ್ರಾಣವನ್ನೇ ತ್ಯಜಿಸುತ್ತದೆ ಹೊರತು ಎಂದೆಂದಿಗೂ ಬೇರೆ ಹೂವುಗಳ ಮಕರಂದವನ್ನು ಹೀರುವುದಿಲ್ಲ.
ಉಪಮೆಯಲ್ಲಿ ನಮಗೆ  ಒಂದು ಪಾಠವಿದೆ. ಸಾಮಾನ್ಯವಾಗಿ ನಮ್ಮ ಭಕ್ತಿ ಚಂಚಲ. ನಮ್ಮ ಭಕ್ತಿಯಲ್ಲಿ ಏಕನಿಷ್ಠೆ ಇರುವುದಿಲ್ಲ. ಇವತ್ತು ಒಬ್ಬರ ಕಾಲು ಹಿಡಿದರೆ ನಾಳೆ ಇನ್ನೊಬ್ಬರ ಮೊರೆಹೋಗುತ್ತೇವೆ. ಹಾಗಾಗಿ ನಮಗೆ ಯಾರ ಅನುಗ್ರಹವೂ ಸಿಗುವುದಿಲ್ಲ. ಮತ್ತು ಕೊನೆಗೆ ಎಲ್ಲರಮೇಲೂ ನಂಬಿಕೆಯನ್ನೇ ಕಳೆದುಕೊಳ್ಳುತ್ತೇವೆ. ಅದಕೆಂದೇ ಅಪ್ಪಣಾಚಾರ್ಯರು ಉತ್ತಮರಾದ ತದೇಕನಿಷ್ಠರಾದ ಭಕ್ತರನ್ನು ಕಮಲಕ್ಕೆ ಮಾರುಹೋದ ದುಂಬಿಗೆ ಹೋಲಿಸಿದ್ದಾರೆ
ನಾವೂ ಕೂಡ ಒಮ್ಮೆ ರಾಯರ ಪಾದಗಳ ಮೊರೆಹೋದರೆ ಎಂಥ ಪರಿಸ್ಥಿಯಲ್ಲಿಯೂ ಕೂಡ ತಾಳ್ಮೆಗೆಡದೆ ತದೇಕನಿಷ್ಠೆಯಿಂದ ರಾಯರ ಅನುಗ್ರಹಕ್ಕಾಗಿ ಪ್ರಾರ್ಥಿಸಬೇಕೇ ಹೊರತು ಒಂದೆರಡು ವಾರ ಆತುರದ ವ್ರತ ಮಾಡಿ, ಪೂರ್ವಾಪರಗಳೇನನ್ನೂ ಚಿಂತಿಸದೇ ಅನುಗ್ರಹ ಸಿಗಲಿಲ್ಲ ಎಂಬ ಕಾರಣಕ್ಕೆ ಇನ್ನೊಬ್ಬರ ಮೊರೆ ಹೋಗಬಾರದು ಎಂಬುದು ತಾತ್ಪರ್ಯ.
ಅಂದ ಮಾತ್ರಕ್ಕೆ ಬೇರೆ ಬೇರೆ ಗುರುಗಳನ್ನು ಉಪೇಕ್ಷಿಸಬೇಕೆಂದು ಇದರ ಅರ್ಥವಲ್ಲ. ನಾವು ಯಾರನ್ನೇ ಭಕ್ತಿಯಿಂದ ಮೊರೆಹೋದರೂ ಅವರಲ್ಲಿ ಅಚಲವಾದ ನಿಷ್ಠೆ ಮತ್ತು ನಂಬಿಕೆ ಇರಬೇಕೆಂಬುದು ಮಾತಿನ ಭಾವ.
Tātparya:
This Ślōka covers the glory of devotees who serve Rayaru’s feet.

To relieve us from our miseries, it is not necessary for Rayaru himself to come to the fore. Instead it suffices for those who have even sought refuge in the dust from his feet to do this capably for us.

As such, those devotees who have anointed themselves with the soil that is in the form of dust from Rayaru’s feet, those who disengage from worthless banter and engage their utterances in the service of eulogizing Rayaru’s lotus like feet, those who like the bee that suckles on the nectar of the lotus constantly reminisce on Rayaru’s feet, the darśan (auspicious sighting) of  such devotees too can burn away all our great miseries just as a wildfire burns down dense jungles to ashes, as brought out in this ślōka.

Just the same as if we touch a flame or a flame touches us, it is our body that burns likewise if we see such devotees as mentioned above, or even if they see us, it is our sins that burn and our sins don’t touch them at all.

The example of the nectar suckling bee cited specially here as it is believed in the poetic world that once a bee tastes the nectar of the lotus, it does not find the nectar of any other flower to be tasty. Having done so once, should it fail to find lotus nectar again, it would prefer starving to death rather than taste the nectar of other flowers.

In this comparison, there is a lesson for us. Generally, our devotion is unsteady. Our devotion lacks focus. If we fall at someone’s feet today, tomorrow we would be chasing someone else. As such we do not benefit from anyone’s grace. In the end, we lose faith in all. It is thus that Appaṇācāryaru has likened Rayaru’s devotees to the bee that is captivated by the lotus’ nectar.

Once that we too are captivated by Rayaru’s feet, under all circumstances, without losing patience, we should seek Rayaru’s grace in a focused manner and not perform some rituals hastily, for solace, for a couple of weeks. We should not rue that we did not get his grace and turn to someone else, is the essence of this ślōka.


Having said that, it does not imply that you should denounce other gurus. The contention here is that whosoever we look forward to with devotion, we need to remain steady in dedication and faith to them.
(Original by Śrī Krishna B R in Kannada, translation to English / Devanagari by Śrī Prasad B S)

No comments:

Post a Comment

ಗೋ-ಕುಲ Go-Kula