Sunday 20 August 2017

Śrī Rāghavēndra Stōtra Ślōka -32 ಶ್ರೀ ರಾಘವೇಂದ್ರ ಸ್ತೋತ್ರ ಶ್ಲೋಕ - ೩೨

ಶ್ಲೋಕ ೩೨.
Ślōka – 32

ಇತಿ ಶ್ರೀ-ರಾಘವೇಂದ್ರಾರ್ಯ- ಗುರು-ರಾಜ-ಪ್ರಸಾದತಃ |       
ಕೃತಂ ಸ್ಟೋತ್ರಮಿದಂ ದಿವ್ಯಂ ಶ್ರೀಮದ್ಭಿರ್ಹ್ಯಪ್ಪಣಾಭಿಧೈಃ ||೩೨|| 

इति श्री-राघवेंद्रार्य-गुरु-राज-प्रसादतः
कृतं स्तोत्रमिदं दिव्यं श्रीमद्भिर्ह्यप्पणाभिदैः ३२॥

iti śrī-rāghavēndrārya- guru-rāja-prasādataḥ |
kr̥taṁ sṭōtramidaṁ divyaṁ śrīmadbhir'hyappaṇābhidhaiḥ ||32||


ಪದಚ್ಛೇದ:
ಇತಿ, ಶ್ರೀರಾಘವೇಂದ್ರಾರ್ಯಗುರುರಾಜಪ್ರಸಾದತಃ), ಕೃತಮ್, ಸ್ತೋತ್ರಮ್, ಇದಮ್, ದಿವ್ಯಮ್, ಶ್ರೀಮದ್ಭಿಃ, ಅಪ್ಪಣಾಭಿಧೈಃ

padacchēda:
इति (iti), श्रीराघवेंद्रार्यगुरुराजप्रसादतः(śrīrāghavēndrāryagururājaprasādataḥ), कृतम्(kr̥tam), स्तोत्रम्(stōtram), इदम्(idam), दिव्यम्(divyam), श्रीमद्भिः(śrīmadbhiḥ), प्पणाभिदैः(appaṇābhidhaiḥ).

ಅನ್ವಯಾರ್ಥ
ಇತಿ –  ರೀತಿಯಾಗಿ ( ವರೆಗೂ ಚಿಂತನೆಮಾಡಿದಂತಃ) ಇದಂದಿವ್ಯಂ ಸ್ತೋತ್ರಂದೈವಿಕವಾದ ಸ್ತೋತ್ರವು, ಶ್ರೀರಾಘವೇಂದ್ರಾರ್ಯಗುರುರಾಜಪ್ರಸಾದತಃಹಿರಿಯರಾದ ಶ್ರೀ ರಾಘವೇಂದ್ರರೆಂಬ ಗುರುಶ್ರೇಷ್ಠರ ಅನುಗ್ರಹದಿಂದ, ಶ್ರೀಮದ್ಭಿಃಶ್ರೀಯುತರಾದ, ಅಪ್ಪಣಾಭಿಧೈಃಅಪ್ಪಣ್ಣ ಎಂಬ ಹೆಸರುಳ್ಳವರಿಂದ, ಕೃತಂಮಾಡಲ್ಪಟ್ಟಿತು
Synonyms:
इति (iti) – In this way (that which has been contemplated till now), इदम्(idam) - this, दिव्यम् स्तोत्रम्,(divyam stōtram) – this stōtra with divinity, श्रीराघवेंद्रार्यगुरुराजप्रसादतः(śrīrāghavēndrāryagururājaprasādataḥ) – by the grace of the venerable supreme guru Śrī Rāghavēndra , श्रीमद्भिः(śrīmadbhiḥ) श्रीयुत(Śrīyuta) – an honorific used for men(which means endowed with Śrī the सत्(sat) or knowledge form of Goddess Lakśmī), प्पणाभिदैः(appaṇābhidhaiḥ) – by the one named Appaṇā,  कृतम्(kr̥tam) – made or composed.

ತಾತ್ಪರ್ಯ:
ಇಂತಃ ಅದ್ಭುತ ಸ್ತೋತ್ರರತ್ನವನ್ನು ಭಕ್ತರಿಗೆ ನೀಡಿದ ಅಪ್ಪಣಾಚಾರ್ಯರು  ಶ್ಲೋಕದಲ್ಲಿ  ಸ್ತೋತ್ರ ರಚನೆಯ ಶ್ರೇಯವನ್ನು ರಾಯರಿಗೇ ಅರ್ಪಿಸಿ ಸ್ವತ್ವದ ತ್ಯಾಗ ಮಾಡುತ್ತ, ನಾನು ಎಂಬುದರ ಲೇಶವೂ ಇಲ್ಲದೆ, ದಿವ್ಯಮಂಗಳವಾದ ಸ್ತೋತ್ರವು ಕೇವಲ, ಗುರುಗಳಿಗೆ ಗುರುವಾದ, ಗುರುಶ್ರೇಷ್ಠರಾದ ಶ್ರೀ ರಾಘವೇಂದ್ರ ಗುರುಗಳ ಅನುಗ್ರಹದಿಂದ, ಶ್ರೀಯುತರಾದ ಅಪ್ಪಣ್ಣ ಎಂಬ ಹೆಸರುಳ್ಳವರಿಂದ ರಚಿಸಲ್ಪಟ್ಟಿತು ಎಂಬುದಾಗಿ, ಕೃತಿಗೂ ತಮಗೂ ನೇರವಾದ ಸಂಬಂಧವೇ ಇಲ್ಲವೆಂಬಂತೆ ಇನ್ನ್ಯಾರದೋ ಬಗ್ಗೆ ಹೇಳುವಹಾಗೆ ಅತ್ಯಂತ ನಮ್ರವಾಗಿ ನಿವೇದಿಸಿಕೊಂಡಿದ್ದಾರೆ. . 
ಇಲ್ಲಿ ಕೆಲವರಿಗೆ ಒಂದು ಪ್ರಶ್ನೆ ಬರಬಹುದು. ಅಪ್ಪಣ್ಣಾಚಾರ್ಯರು ತಮ್ಮನ್ನೇ ತಾವು ಬಹುವಚನದಿಂದ ಏಕೆ ಕರೆದುಕೊಂಡರು ತಮಗೆ ತಾವೇ ಬಹುವಚನದಿಂದ ಕರೆದುಕೊಳ್ಳುವುದು ತಪ್ಪಲ್ಲವೇ?

ಇದಕ್ಕೆ ಉತ್ತರ ಬಹಳ ದೀರ್ಘವಾಗಿದೆ. ಆತ್ಮನಿ ಬಹುವಚನಂ ಎಂಬುದು ಒಂದು ಸೂತ್ರ.. ಅದರಂತೆ ಯಾರೇ ಆಗಲಿ ತಮ್ಮ ಬಗ್ಗೆ ತಾವು ಹೇಳಿಕೊಳ್ಳುವಾಗ ತಮ್ಮಲ್ಲಿಯೇ ಬಹುವಚನ ಪ್ರಯೋಗಿಸಬಹುದು. ಸಾಮಾನ್ಯವಾಗಿ ಯತಿಗಳು, ಯೋಗಿಗಳು ಅಥವಾ ಇನ್ನ್ಯಾವುದೇ ಜ್ಞಾನಿಗಳು, ನಾವು ನೋಡಿದೆವು, ನಾವು ಕೇಳಿದೆವು, ನಾವು ಬರುತ್ತೇವೆ ಎಂಬುದಾಗಿ ಮಾತನಾಡುವುದನ್ನು ಗಮನಿಸಿರಬಹುದು. ಕೆಲವರು ಅದನ್ನೂ ಆಡಿಕೊಳ್ಳುತ್ತಾರೆ ಪಾಪ ಇವರಿಗೆ ಏಕವಚನ ಬಹುವಚನಗಳ ಜ್ಞಾನವೂ ಇಲ್ಲ ಎಂದು. ಆದರೆ ವಾಸ್ತವವಾಗಿ ಅಂಥವರಿಗೇ ವಿಶಯದಲ್ಲಿ ಜ್ಞಾನವಿರುವುದಿಲ್ಲ. ಆತ್ಮನಿ ಬಹುವಚನಂ ಎಂಬ ಮಾತಿನ ಹಿಂದೆ ಒಂದು ಗಹನವಾದ ಆಧ್ಯಾತ್ಮದ ಅನುಸಂಧಾನವಿದೆ ಮತ್ತು ಅದು ಆಚಾರ್ಯ ಮಧ್ವರು ಹೇಳಿದ ಅಂತರ್ಯಾಮಿ ತತ್ತ್ವಕ್ಕೆ ಬಹಳ ಪೂರಕವಾಗಿದೆ

ಅದೇನೆಂದರೆ, ಯಾವುದೇ ಒಬ್ಬ ಜೀವಿ ತಾನೇ ತಾನಾಗಿ ಏನನ್ನೂ ಮಾಡಲಾರ. ಒಬ್ಬ ಜೀವಿಯ ಒಂದು ಕ್ರಿಯೆಯ ಹಿಂದೆ ಬಹಳಷ್ಟು ತತ್ತ್ವಾಭಿಮಾನಿ ದೇವತೆಗಳ ಅನುಗ್ರಹ ಮತ್ತು  ಪ್ರೇರಣೆಯ ಬಲವಿರುತ್ತದೆ. “ನಾನು ಚಿತ್ರವನ್ನು ನೋಡಿದೆಎಂಬುದು ಬಹಳ ಸಾಮಾನ್ಯವಾದ ಕ್ರಿಯೆಯಂತೆ ತೋರುತ್ತದೆ. ಆದರೆ, ಅದನ್ನು ನೋಡುವ ಕ್ರಿಯೆಯಲ್ಲಿ  ನನ್ನ ಅಧಿಕಾರವೆಷ್ಟು? ನಾನು ಹುಟ್ಟುವಾಗಲೇ ಕಣ್ಣಿತ್ತು ಮತ್ತು ಅದಕ್ಕೆ ಕಾಣುವ ಶಕ್ತಿ ಇತ್ತು ಹಾಗಾಗಿ ಕಂಡಿತು. ಒಂದು ದಿನ ಕಾಣದೇ ಹೋದರೆ ಅಲ್ಲಿಗೆ ಮುಗಿಯಿತು. ಮತ್ತೆ ಕಾಣುವಂತೆ ಮಾಡಿಕೊಳ್ಳುವ ಶಕ್ತಿ ನಮಗಿಲ್ಲ. ಕಾಣುವ ಶಕ್ತಿ ಇದ್ದರಷ್ಟೆ ಸಾಕೇ? ಅದೂ ಇಲ್ಲ. ನೋಡುವುದಕ್ಕೆ ಬೆಳಕು ಅವಶ್ಯವಾಗಿ ಬೇಕು. ಕಾಣಿಸಿದ ವಸ್ತು ನಾನು ತಂದದ್ದಲ್ಲ. ಕಾಣುವ ಕ್ರಿಯೆಗೆ ಕಾರಣವಾದ ಬೆಳಕು ನನ್ನದಲ್ಲ. ಸೂರ್ಯ ಚಂದ್ರರು ನೋಡಿಸಬೇಕು. ದಿಗ್ದೇವತೆಗಳು ಕೇಳಿಸಬೇಕು. ಅಶ್ವಿದೇವತೆಗಳು ಉಸಿರಾಡಿಸಬೇಕು. ಅಗ್ನಿ ನುಡಿಸಬೇಕು. ಇಂದ್ರ ನಮ್ಮ ಕೈಯ್ಯಿಂದ ಎಲ್ಲ ಕೆಲಸವನ್ನೂ ಮಾಡಿಸಬೇಕು. ಗರುಡ ಶೇಷ ರುದ್ರರು ಯೋಚಿಸುವ, ನುಡಿಯುವ, ನೆನಪಿಟ್ಟುಕೊಳ್ಳುವ ಶಕ್ತಿಯನ್ನು ಕೊಡಬೇಕು. ಪ್ರಾಣದೇವರು ಗಾಳಿಬೆಳಕು ನೀರಿನಲ್ಲಿ ಪ್ರಾಣಶಕ್ತಿಯನ್ನಿಟ್ಟು ನಮ್ಮನ್ನು ಜೀವಂತವಾಗಿರಿಸಬೇಕು. ಹೀಗೆ ಪ್ರತಿಯೊಂದು ಕ್ರಿಯೆಯನ್ನು  ತತ್ತ್ವಾಭಿಮಾನಿದೇವತೆಗಳು ನಮ್ಮಿಂದ ಮಾಡಿಸುವುದರಿಂದ, ಮತ್ತು ನಮ್ಮ ಕ್ರಿಯೆಗಳಮೇಲೆ ನಮ್ಮ ಅದಿಕಾರವಿಲ್ಲದ್ದರಿಂದ, ನಾನು ಮಾಡಿದೆ ಎನ್ನುವುದೇ ಅಹಂಕಾರವಾಗುತ್ತದೆ
ಹೀಗೆ ರಾಯರ ಅನುಗ್ರಹದಿಂದಲೇ ರಚಿತವಾದ, ರಾಯರನ್ನೇ ಸ್ತುತಿಸುವ ಸ್ತೋತ್ರರತ್ನದ ರಚನೆಕಾರರಾದ ಶ್ರೀ ಅಪ್ಪಣಾಚಾರ್ಯರು ಸ್ವತ್ವದ ತ್ಯಾಗವನ್ನು ಮಾಡಿ, ರಾಯರ ಅನುಗ್ರಹ ಪಡೆಯುವ ದಾರಿಯಲ್ಲಿ ನಮಗೆಲ್ಲರಿಗೂ  ಮಾರ್ಗದರ್ಶಕರಾಗಿ ನಿಲ್ಲುತ್ತಾರೆ
ವಿ.ಸೂ.
ಬೇರೆ ಬೇರೆ ಪಾಠಗಳಲ್ಲಿ ಲಭ್ಯವಿರುವ ರಾಯರ ಸ್ತೋತ್ರದ ಶ್ಲೋಕದಲ್ಲಿ ಕೃತಂ ಸ್ತೋತ್ರಂ ಇದಂ ಪುಣ್ಯಂ ಎಂದಿದೆ. ಆದರೆ, ಅರ್ಥಾನುಸಂಧಾನಕ್ಕಾಗಿ ಆಚಾರ್ಯರಿಂದ ಸಂಪಾದಿತವಾದ ಸ್ತೋತ್ರದ ಶುದ್ಧ ಪಾಠದಲ್ಲಿರುವಂತೆಕೃತಂ ಸ್ತೋತ್ರಂ ಇದಂ ದಿವ್ಯಂಎಂಬ ಪಾಠವನ್ನು ಬಳಸಿಕೊಂಡಿದ್ದೇನೆ.
ಈಗ ಪ್ರಚಲಿತವಿರುವ ಸ್ತೋತ್ರದ ಪಾಠದಲ್ಲಿ ಒಟ್ಟು 34 ಶ್ಲೋಕಗಳಿವೆ. ಆದರೆ, ಆಚಾರ್ಯರು ಸಂಪಾದಿಸಿರುವ ರಾಯರಸ್ತೋತ್ರದ ಶುದ್ಧ ಪಾಠದಲ್ಲಿ 32 ಶ್ಲೋಕಗಳಿವೆ
ಕೇವಲ ಸಂಖ್ಯಾನುಕ್ರಮಣಿಕೆಯಲ್ಲಿ ಮಾತ್ರ ವ್ಯತ್ಯಾಸವಿದೆ ಅಷ್ಟೆ

32 ಶ್ಲೋಕಗಳು (ಮೂವತ್ತೆರಡು) ದ್ವಾತ್ರಿಂಶತ್ ಲಕ್ಷಣೋಪೇತನಾದ ಭಗವಂತನ ಮತ್ತು ವಾಯುದೇವರ ಪರಮ ಭಕ್ತರಾದ ರಾಯರ ಸ್ತೋತ್ರದಲ್ಲಿ ಹೆಚ್ಚು ಸೂಕ್ತವಾಗಿ ಕಾಣುತ್ತದೆ.

Tātparya:
Appaṇācāryaru, who gave the devotees such an exquisite stōtra, dedicates all recognition in this work to Rayaru, sacrificing any self-identification that might come in as its composer. This Ślōka tells us that there is not even the slightest hint of a feeling of I, as the doer, as he distances with all humility, from any direct attribution to himself in its making, stating that this divinely auspicious stōtra’s composition by Śrīyuta Appaṇā, is solely due to the grace of the guru of gurus, the supreme guru, namely Śrī Rāghavēndra.

This might raise a query in some. How can Appaṇācārya address himself in plural terms (generally reserved for second or third persons as per local customs, as a respectful way of address) in this Ślōka. Isn’t this improper?

There is a slightly elaborate answer for this. There is a sutra(an aphorism) – आत्मनि बहुवचनम्(ātmani bahuvacanaṁ) .. which means, when one talks about one’s self, one can employ plural terms. Generally, we may have observed that yatis(ascetics), yogis or any scholar too, uses ‘we gave this, we asked for it, we shall attend… etc.,’ when referring to their own selves in a conversation. Some may mock this custom stating that these people are ignorant of the appropriateness of singular, plural terms while communicating. In reality, it is the sceptics that are ignorant in this matter. The maxim आत्मनि बहुवचनम्(ātmani bahuvacanaṁ) has a very significant philosophical implication and also linkage to the principle of antāryami (indweller) propounded by Ācārya Madhva. What is indicated in this, is that no one performs any action by oneself. Every action of a sentient being, is supported by the strength of, grace and inspiration from, the tattvābhimānidēvatas (deities or demigods, designated for the entitled maximal or optimal functioning, of each class and/or the relative organs, of sense or action). “I saw that picture,” appears to be a very ordinarily performed action. However, in ‘seeing that picture’, how much is my actual entitlement? Right when I was born, I had eyes endowed with the faculty of sight and thereby, I was able to ‘see’. Someday, if it becomes ‘unsighted’, everything would be over, then. Which means, we do not possess the power to make something visible. Does it suffice if we merely possess the faculty of sight? Not just that, don’t we need light to see? Further, neither the object that is seen is brought in here by me, nor is the light required in the action of seeing, mine. Then sun and the moon should facilitate our seeing. The digdēvatas should help us hear. Ashvidēvatas should facilitate our breathing. Agni should make us talk. Indra should help us in the actions with our hands. Garuḍa, Śēṣa, Rudra should respectively make us think, speak and remember. Prāṇadēva should infuse energy, in air and water, to keep us alive. In this way, as the tattvābhimānidēvatas corresponding to each element here, help us perform any action and also, as I do not have authority over the action performed, will not stating ‘I did something’ tantamount to my being egoistic?

In this way, this composition that has materialised by the grace of Rayaru, and that which eulogises Rayaru, stands out as a gem of a stōtra. Its composer Appaṇācāryaru who has sacrificed all self-identification with it, stands out as a beacon for us in the path that leads us to seek the grace of Rayaru.  

Note:
In various texts of the extant Rayara stōtra, this ślōka contains the phrase कृतं स्तोत्रं इदं पुण्यं(kr̥tam stōtram idam puṇyaṁ), However in the text that our Ācāryaru has published, to reflect appropriate intent, the phrase reads ‘कृतं स्तोत्रं इदं  दिव्यं (kr̥taṁ sṭōtram idaṁ divyaṁ)’, and the same has been adapted in this analysis.

In other texts of this stōtra which are in vogue, the total number of ślōkas is seen to be 34. In our Ācāryaru’s publication, however this number is 32. The variation is merely in the nominal numbers and not in the content.


yudēva and the Lord, possess द्वात्रिंशत्(dvātrinśat) [thirty-two] attributes, whose ardent devotee is Rayaru, and this is resonated by the 32 Ślōkas of this stōtra.


(Original by Śrī Krishna B R in Kannada, translation to English / Devanagari by Śrī Prasad B S)

No comments:

Post a Comment

ಗೋ-ಕುಲ Go-Kula