Wednesday 16 August 2017

Śrī Rāghavēndra Stōtra Ślōka 23 ಶ್ರೀ ರಾಘವೇಂದ್ರ ಸ್ತೋತ್ರ ಶ್ಲೋಕ ೨೩

ಶ್ಲೋಕ ೨೩.
Ślōka 23.

ರಾಘವೇಂದ್ರ-ಗುರು-ಸ್ತೋತ್ರಂ ಯಃ ಪಠೇದ್ಭಕ್ತಿ-ಪೂರ್ವಕಮ್ |
ತಸ್ಯ ಕುಷ್ಠಾದಿ-ರೋಗಾಣಾಂ ನಿವೃತ್ತಿಸ್ತ್ವರಯಾ ಭವೇತ್ ||೨೩||

राघवेंद्र-गुरु-स्तोत्रं यः पठेद्भक्ति-पूर्वकम्
तस्य कुष्ठादि-रोगाणां निवृत्तिस्त्वरया भवेत् ॥२३॥

rāghavēndra-guru-stōtraṁ yaḥ paṭhēdbhakti-pūrvakam |
tasya kuṣṭhādi-rōgāṇāṁ nivr̥ttistvarayā bhavēt ||23||

ಪದಚ್ಛೇದ:
ರಾಘವೇಂದ್ರಗುರುಸ್ತೋತ್ರಮ್, ಯಃ, ಪಠೇತ್, ಭಕ್ತಿಪೂರ್ವಕಮ್
ತಸ್ಯ, ಕುಷ್ಠಾದಿರೋಗಾಣಾಮ್, ನಿವೃತ್ತಿಃ, ತ್ವರಯಾ, ಭವೇತ್.

padacchēda: 
राघवेंद्रगुरुस्तोत्रम्(rāghavēndragurustōtram), यः(yah), पठेत्(paṭhēt) क्तिपूर्वकम्(bhaktipūrvakam), तस्य(tasya), कुष्ठादिरोगाणाम्(kuṣṭhādirōgāṇām), निवृत्तिः(nivr̥ttiḥ), त्वरया(tvarayā), भवेत्(bhavēt)

ಅನ್ವಯಾರ್ಥ:
ಯಃ- ಯಾರು, ರಾಘವೇಂದ್ರಗುರುಸ್ತೋತ್ರಂರಾಘವೇಂದ್ರ ಗುರುಗಳ ಸ್ತೋತ್ರವನ್ನು, ಭಕ್ತಿ ಪೂರ್ವಕಂಭಕ್ತಿಪೂರ್ವಕವಾಗಿ, ಪಠೇತ್ಪಠನೆ ಮಾಡುತ್ತಾನೆ, ತಸ್ಯಅವನ, ಕುಷ್ಠಾದಿರೋಗಾಣಾಂಕುಷ್ಠವೇ ಮೊದಲಾದ ರೋಗಗಳ, ನಿವೃತ್ತಿಃಪರಿಹಾರವು, ತ್ವರಯಾ- ಕೂಡಲೇ, ಭವೇತ್ಅದೀತು

Synonyms:
यः(yah) – he who, राघवेंद्रगुरुस्तोत्रम्(rāghavēndragurustōtram) - the Rāghavēndra guru stōtra, क्ति पूर्वकम्(bhakti pūrvakam) – devotedly, पठेत्(paṭhēt) – reads, chants, तस्य(tasya) his, कुष्ठादिरोगाणाम्(kuṣṭhādirōgāṇām) – diseases like leprosy etc, निवृत्तिः(nivr̥ttiḥ) - cured, त्वरया(tvarayā) - immediately, भवेत्(bhavēt) – gets.

ತಾತ್ಪರ್ಯ:
ಇಲ್ಲಿ ಸ್ತೋತ್ರವನ್ನು ಭಕ್ತಿಪೂರ್ವಕವಾಗಿ ಹೇಳುವವರಿಗೆ ಎಂದು ಹೇಳಿದ್ದಾರೆ. ಹಾಗೆ ಹೇಳಿದಾಗ ಮಾತ್ರ ನಮ್ಮ ಮನಸ್ಸು ಅದರಲ್ಲಿ ಕೇಂದ್ರೀಕೃತವಾಗಿ ಶಕ್ತಿ ಜಾಗ್ರತವಾಗುತ್ತದೆ. ಯಾವುದೇ ಕೆಲಸ ಮಾಡುವಾಗ ಅದರಲ್ಲಿ ಉತ್ತಮ ಫಲ ಸಿಗಬೇಕೆಂದರೆ ಮೊದಲು ಕೆಲಸದಲ್ಲಿ ಆಸಕ್ತಿ ಇರಬೇಕು. ಮತ್ತು ಕೆಲಸದ ಪೂರ್ಣ ಜ್ಞಾನ ಇದ್ದಾಗ ಮಾತ್ರ ಆಸಕ್ತಿ ಬರಲು ಸಾಧ್ಯ.

ಮಾಹಾತ್ಮ್ಯ ಜ್ಞಾನ ಪೂರ್ವಸ್ತು ಸ್ನೇಹೋ ಭಕ್ತಿರಿತೀರಿತಃ.

ಎಂದು ಮಹಾಭಾರತ ತಾತ್ಪರ್ಯ ನಿರ್ಣ್ಣಯದಲ್ಲಿ ಆಚಾರ್ಯ ಮಧ್ವರು ಹೇಳುವಂತೆ ಭಕ್ತಿ ಎಂದರೆ ಮಾಹಾತ್ಮ್ಯ ಜ್ಞಾನ ಪೂರ್ವಕವಾಗಿ ಹುಟ್ಟಿದ ಪ್ರೀತಿ. ರಾಯರ ಮಹಾತ್ಮೆಯನ್ನು ತಿಳಿದು ಅವರನ್ನು ಪ್ರೀತಿಸಿದರೆ ಅದೇ ನಾವು ಅವರಲ್ಲಿ ಮಾಡುವ ಭಕ್ತಿ. ಕಿರಿಯರಲ್ಲಿ ಮಾಡುವ ಪ್ರೀತಿ - ಅನುಕಂಪೆ. ಹಿರಿಯರಲ್ಲಿ ಮಾಡುವ ಪ್ರೀತಿಭಕ್ತಿ
ಹಾಗಾಗಿ ನಾವು ಗುರು ರಾಯರ ಸ್ತೋತ್ರವನ್ನು ಪ್ರೀತ್ಯಾದರ ಪೂರ್ವಕವಾಗಿ ಪಠಿಸುವುದರಿಂದ ಕುಷ್ಠವೇ ಮೊದಲಾದ ಭಯಾನಕ ರೋಗಗಳೂ ಕೂಡ ಪರಿಹಾರವಾಗುತ್ತವೆ ಎಂಬುದು ಶ್ಲೋಕದ ತಾತ್ಪರ್ಯ.

Tātparya: 
Those who chant this ślōka devotedly are covered here. Only when it is chanted thus, does our mind get charged, in a focused manner.   Whenever we set out to do some work, for the best results, we need to be enthusiastic about it. Again, only when we completely know what is to be done, would we be motivated to do it.

As mentioned by Ācārya Madhva in the Mahābhārata Tātparya Nirṇaya-
माहात्म्य ज्ञान पूर्वस्तु स्नेहो भक्तिरितीरितः(māhātmya jñāna pūrvastu snēhō bhaktiritīritaḥ)

Bhakti (devotion) is the love that comes from becoming fully aware of the greatness. If we love Rayaru after becoming aware of his greatness, that is nothing but expressing our devotion towards him.  The love towards someone who is younger to us (or even, not so mature as us)is - compassion while the love towards one who is venerable, is - devotion. 


As such, when we chant or read the Rayara Stōtra with respectful love, even dreaded ailments like leprosy will be cured, is the intent of this ślōka.  
(Original by Śrī Krishna B R in Kannada, translation to English / Devanagari by Śrī Prasad B S)

No comments:

Post a Comment

ಗೋ-ಕುಲ Go-Kula