Friday 11 August 2017

Śrī Rāghavēndra Stōtra ಶ್ರೀ ರಾಘವೇಂದ್ರ ಸ್ತೋತ್ರ - Foreword: ಮುನ್ನುಡಿ.



ಮುನ್ನುಡಿ.


ಶ್ರೀ ರಾಘವೇಂದ್ರ ಸ್ತೋತ್ರ..


ಹೆಸರು ಕೇಳಿದ ಮಾತ್ರಕ್ಕೆ ಸಜ್ಜನರ ಮೈಮನಸ್ಸುಗಳನ್ನು ಪಾವನ ಗೊಳಿಸುವ,


ಸ್ತೋತ್ರ ಕಾವ್ಯ ಪರಂಪರೆಯ ಉಜ್ವಲ ಹಾದಿಯಲ್ಲಿ ಮೈಲಿಗಲ್ಲಿನಂಥ: ಅದ್ಭುತ ಸ್ತೋತ್ರ.


ರಚಿಸಿದವರು ರಾಯರ ಅಂತರಂಗ ಶಿಷ್ಯರು, ಭಕ್ತರು, ಜ್ಞಾನಿಗಳೂ ಆದ ಶ್ರೀ ಅಪ್ಪಣಾಚಾರ್ಯರು.


ಶಿಷ್ಯನ ಮೃದು ಹೃದಯನ್ನೂ, ತಮ್ಮ ಮೇಲೆ ಅವರಿಟ್ಟ ಅತಿಶಯ ಪ್ರೀತಿಯನ್ನೂ


ತಿಳಿದಿದ್ದ ರಾಘವೇಂದ್ರ ಸ್ವಾಮಿಗಳು, ತಾವು ವೃಂದಾವನಸ್ಥರಾಗುವ ಸಂದರ್ಭ ಬಂದಾಗ


ಅಪ್ಪಣಾಚಾರ್ಯರನ್ನು ಯಾವುದೋ ಕೆಲಸದ ನೆಪವೊಡ್ಡಿ ಬೇರೆಕಡೆಗೆ ಕಳುಹಿಸಿರುತ್ತಾರೆ.


ಆದರೆ, ಶಿಷ್ಯನ ಅಂತರಂಗದಲ್ಲಿ ಏನೋ ತಿಳಿಯಲಾರದ ತಳಮಳ. ಆಡುವ ಹಾಗಿಲ್ಲ ಅನುಭವಿಸುವ


ಹಾಗಿಲ್ಲ ಎಂಬಂಥ ಸ್ಥಿತಿ. ರಾಯರು ವೃಂದಾವನಸ್ಥರಾಗುವ ವಿಷಯ ತಿಳಿದಮೇಲಂತೂ ಹೃದಯವೇ


ಬಿರಿದುಹೋದಂಥ ಆಘಾತ. ಇನ್ನು ಮುಂದೆ ರಾಯರು ತನ್ನ ಕಣ್ಣುಗಳಿಗೆ ಎಂದೆಂದೂ ಕಾಣದಹಾಗೆ


ಮರೆಯಾಗಿಬಿಡುತ್ತಾರೆಂಬ ಸತ್ಯವನ್ನು ಅರಗಿಸಿಕೊಳ್ಳಲಾರದ ದು:ಖ. ತನ್ನ ಗುರುಗಳು


ಹೀಗೆ ತನ್ನನ್ನು ಬಿಟ್ಟುಹೋಗುತ್ತಿದ್ದಾರೆಂಬ ಆತಂಕ. ಹೀಗೆ ನಿಂತ ನಿಲುವಿನಲ್ಲೇ ಎಲ್ಲವನ್ನೂ ಬಿಟ್ಟು


ಕಡೆಯಬಾರಿಗೆ ತನ್ನ ಗುರುಗಳನ್ನು ಒಮ್ಮೆಯಾದರೂ ನೋಡಲೇ ಬೇಕೆಂಬ ಧಾವಂತದಿಂದ


ಆಯಾಸದ ಪರಿವೆಯೇ ಇಲ್ಲದೆ ಒಂದೇ ಓಟದಲ್ಲಿ ಮಂಚಾಲೆಯೆಡೆಗೆ ಬಂದರೆ ದಾರಿಗಡ್ಡವಾಗಿ


ಭೋರ್ಗರೆದು ಹರಿಯುವ ವರ್ಷ ಋತುವಿನ ತುಂಗಭದ್ರಾ ಪ್ರವಾಹ. ರಾಯರು ಕಣ್ಮರೆಯಾಗುತ್ತಾರೆಂಬ


ದು:ಖದ ಮುಂದೆ ತನ್ನ ಪ್ರಾಣದ ಪರಿವೆಯನ್ನೇ ಮಾಡದೆ, ಎರಡನೆಯ ಚಿಂತನೆಗೆ ಆಸ್ಪದವನ್ನೇ ಕೊಡದೆ


ಆ ಉಕ್ಕಿಬರುವ ಪ್ರವಾಹದಲ್ಲಿ ಜಿಗಿದು ರಾಯರ ಅನುಗ್ರಹದಿಂದಲೇ ಆಚೆ ದಡಸೇರಿ,


ರಾಯರ ಅಪಾರ ಕರುಣೆಯನ್ನು ನೆನೆ ನೆನೆದು ಅದೇ ಸ್ಫೋರ್ತಿಯಲ್ಲಿ ಧಾವಿಸುತ್ತಿದ್ದ ಅವರ


ಮುಖದಿಂದ ಅವರಿಗರಿವಿಲ್ಲದಂತೆಯೇ ಒಂದು ಅದ್ಭುತ ಸ್ತೋತ್ರ ಹೊರಟಿತು.


ಶ್ರೀ ಪೂರ್ಣಬೋಧ ಗುರುತೀರ್ಥ ಪಯೋಬ್ಧಿ ಪಾರಾ…. ಎಂದು ಸಾಗಿದ, ತುಂಗಭದ್ರೆಯ ಪ್ರವಾಹವನ್ನು


ಮೀರಿಸುವ ಆ ಪ್ರವಾಹ ರಾಯರು ಬೃಂದಾವನಸ್ಥರಾಗುವ ಸ್ಥಳ ತಲುಪುವ ವೇಳೆಗೆ ಎಲ್ಲವೂ


ಮುಗಿದುಹೋಗಿತ್ತು. “”ಕೀರ್ತಿರ್ದಿಗ್ವಿದಿತಾ ವಿಭೂತಿರತುಲಾ”” ಎಂಬ ಕೊನೆಸಾಲಿನೊಂದಿಗೆ ಅವರು


ಅಲ್ಲಿಗೆ ತಲುಪುವುದಕ್ಕೂ, ವೃಂದಾವನಕ್ಕೆ ಕೊನೆಯ ಕಲ್ಲನ್ನಿಟ್ಟ ಭಕ್ತವೃಂದದ  ಜೈಕಾರ ಮುಗಿಲುಮುಟ್ಟುವುದಕ್ಕೂ ಸರಿಹೋಗಿತ್ತು.


ಕೊನೆಗೂ ಅಪ್ಪಣಾಚಾರ್ಯರಿಗೆ ರಾಯರ ದಿವ್ಯಮಂಗಳಾಕೃತಿಯನ್ನು


ಕಣ್ಣುತುಂಬಿಕೊಳ್ಳುವ ಅವಕಾಶವೇ ಸಿಗಲಿಲ್ಲ.


ಆದರೆ, ಅವರ ಭಾಗ್ಯವೇನೂ ಕಮ್ಮಿಯದ್ದಾಗಿರಲಿಲ್ಲ. ಅವರ ಮುಖದಿಂದ ಹೊರಟ


ಭಕ್ತಿಪೂರ್ಣವಾದ ಆ ಸ್ತೋತ್ರವೆಂಬ ವಾಕ್ಪ್ರವಾಹ ರಾಯರ ಪಾದಗಳನ್ನು


ತೊಳೆಯುವುದರಲ್ಲಿ ಸಫಲವಾಗಿತ್ತು. ಅಂತೆಯೇ ಆ ಸ್ತೋತ್ರಕ್ಕೆ  “” ಸಾಕ್ಷೀ ಹಯಾಸ್ಯೋತ್ರಹಿ””


ಎಂಬ ಅಶರೀರವಾಣಿಯ ಅಂಕಿತವೂ ಸಿಕ್ಕಿತ್ತು.


ನಮಗೆ ಅಪೂರ್ವವಾದ ಸ್ತೋತ್ರರತ್ನವೊಂದು ಸಿಕ್ಕಿತು.


ಬಹುಶ: ವಾಯುಸ್ತುತಿಯ ನಂತರ, ಒಬ್ಬ ಗೃಹಸ್ಥನ ಕೃತಿಯನ್ನು


ದೊಡ್ಡ ಯತಿಗಳು ಕೂಡ ಭಕ್ತಿಯಿಂದ ಪಠಿಸುವ ಸ್ತೋತ್ರ


ಶ್ರೀ ರಾಘವೇಂದ್ರ ಸ್ತೋತ್ರ” ಎಂದರೆ ಅತಿಶಯೋಕ್ತಿಯಾಗಲಾರದು.


ಇಂಥ: ಅಸಾದಾರಣ ಸ್ತೋತ್ರಕ್ಕೆ ಅರ್ಥ ಚಿಂತನೆಯನ್ನು


ನನ್ನಂಥ ಒಬ್ಬ ಯಕಶ್ಚಿತ್ ಬಾಲಕ ಮಾಡುತ್ತೇನೆನ್ನುವುದು ನಿಜಯಾಗಿಯೂ


ಯೋಗ್ಯತೆಯನ್ನು ಮೀರಿದ ಸಾಹಸ.


ಆದರೆ, ಈ ಬಾಲಕನ ಮನಸ್ಸಿನಲ್ಲಿ ಈ ಸ್ತೋತ್ರದ ಅರ್ಥ ಚಿಂತನೆ ಮಾಡುವ


ಬಯಕೆಯ ಬೀಜ ಬಿತ್ತಿದ ಗುರುಗಳೇ ಈ ಚಿಂತನೆಯ ಪರ್ಯಾಯವನ್ನು ಸುಸೂತ್ರವಾಗಿ


ಮಾಡಿಸುತ್ತಾರೆಂಬ ಅದಮ್ಯ ವಿಶ್ವಾಸದೊಂದಿಗೆ ಈ ಹೊಸ ಚಿಂತನಾ ಪರ್ಯಾಯಕ್ಕೆ


ನನಗೆ ತೋಚಿದ ಬಾಲಭಾಷೆಯ ಮುನ್ನುಡಿ ಬರೆಯುತ್ತಿದ್ದೇನೆ.


ಕೆಲವು ತಿಂಗಳುಗಳಿಂದ ಎಷ್ಟೇ ಪುಸ್ತಕ ವಿವರಣೆಗಳನ್ನು ಎಷ್ಟುಬಾರಿ ಓದಿದರೂ


ಚಿಂತನೆಯ ಹಾದಿಯಲ್ಲಿ ಒಂದು ಹೆಜ್ಜೆಯನ್ನೂ ಇಡಲಾರದೆ ದಿಗ್ಮೂಢನಾಗಿದ್ದ


ನನಗೆ ರಾಯರೇ ದಾರಿತೋರಿಸಿದರು.


ಅಂತರ್ಜಾಲದಲ್ಲಿ ಏನನ್ನೋ ಹುಡುಕುವಾಗ


ಮಂತ್ರಾಲಯದ ಒಬ್ಬ ವಿದ್ವಾಂಸರು (ಹೆಸರನ್ನು ತಿಳಿಯಲಾಗದ್ದಕ್ಕೆ ಕ್ಷಮೆ ಯಾಚಿಸುತ್ತೇನೆ) ಮತ್ತು ಪಲಿಮಾರುಮಠಾಧೀಶರಾದ


ಶ್ರೀ ವಿದ್ಯಾಧೀಶ ತೀರ್ಥರ ಅತ್ಯಂತ ವಿಸ್ತೃತವಾದ ಈಸ್ತೋತ್ರದ ಮೊದಲ ಕೆಲವು ಶ್ಲೋಕಗಳ ಪ್ರವಚನದ ಧ್ವನಿಮುದ್ರಣ ಸಿಕ್ಕಿ, ಅದಕ್ಕೆ ಪೂರಕವಾಗಿ ನಮ್ಮ ಪೂಜ್ಯ ಗುರುಗಳಾದ ಬನ್ನಂಜೆ ಗೋವಿಂದಾಚಾರ್ಯರ, ರಾಯರ ಸ್ತೋತ್ರದ ಕನ್ನಡಾನುವಾದ ಮತ್ತು ಸ್ವಲ್ಪ ಮಟ್ಟಿಗಿನ ಸಂಸ್ಕೃತ ವ್ಯಾಖ್ಯಾನ ಸಿಕ್ಕಮೇಲೆ


ಎಲ್ಲೋ ಅಂತರಂಗದಲ್ಲಿ ಹುಗಿದುಹೋಗಿದ್ದ ಬಯಕೆ ಮತ್ತೆ ಮೊಳಕೆಯೊಡೆಯುತ್ತಿದೆ.


ಯಥಾಪ್ರಕಾರ ನನ್ನ ಅತ್ಯಂತ ಆತ್ಮೀಯರೂ, ಹಿತೈಷಿಗಳೂ, ಹಿರಿಯರೂ ಮೇಲಾಗಿ


ಉತ್ಸಾಹಶೀಲ ಚಿಂತಕರೂ ಆದ ಶ್ರೀಯುತ ಪ್ರಸಾದ್ ಅವರ ಮಾರ್ಗದರ್ಶನ


ಮತ್ತು ಆಂಗ್ಲ ಅನುವಾದದ ಆತ್ಮವಿಶ್ವಾಸದೊಂದಿಗೆ ಮತ್ತು ಬಹಳ ದೊಡ್ಡ


ಆಲಸ್ಯಮಯ ವ್ಯರ್ಥಸಮಯದ ಬಿಡುವಿನ ನಂತರ ಬಳಗದ ಗೆಳೆಯರೊಂದಿಗೆ


ಮತ್ತೆ ಕೂಡಿಕೊಳ್ಳುವ ಉತ್ಸಾಹದೊಂದಿಗೆ ಶ್ರೀ ರಾಘವೇಂದ್ರ ಸ್ತೋತ್ರದ


ಅರ್ಥ ಚಿಂತನಾ ಪರ್ಯಾಯವನ್ನು ಕೇವಲ ರಾಯರ ಪ್ರೀತಿಯ, ತನ್ಮೂಲಕ ಶ್ರೀ ಹರಿಗುರುಗಳ


ಪ್ರೀತಿಯ ಕಾಮನೆಯೊಂದಿಗೆ ಶುರುಮಾಡುತ್ತಿದ್ದೇನೆ.


Foreword:


Śrī Rāghavēndra Stōtra..


A marvellous stōtra that may be regarded as a landmark in the glowing path of poetic traditions and such a one, on merely hearing its very name, it sanctifies the minds and bodies of all good folks. The composer Śrī Appaṇācāryaru, a disciple close to Rayaru’s heart, was an ardent devotee and a learned one at that. Aware of his disciple’s tender heart and his extreme affection towards himself, Rāghavēndra Swamigalu had Appaṇācārya visiting some distant place, on an errand, when it was time to move into the Vr̥ndāvana. The disciple’s mind was, however, inexplicably restive. He could neither express nor experience what tormented him – such was his state. He soon learnt that Rayaru had positioned himself in the Vr̥ndāvana. This was a deadly blow; it was like as if his heart was ripped apart. That his eyes would not sight Rayaru any more, was an incomprehensible truth which dismayed him. He was deeply upset that his guru was forsaking him thus. Disregarding everything else, gripped by a fervent desire for that one last glimpse of his guru, Appaṇācārya retraced his journey back to Man̄cāle, unmindful of any weariness or fatigue. Closer home, he was confronted by a thunderous Tuṅgabhadrā river that was in spate during the rainy season. The agony that Rayaru would vanish from sight was so great, that Appaṇācārya was unmindful of any threat to his own life from the raging river in front. He waded into it, throwing caution to wind, with his mind relentlessly recalling Rayaru’s compassion, without space for any second thoughts. In that resultant overpowering zeal, there streamed forth from his lips, unknown to himself, an exquisite stōtra. Commencing with श्रीपूर्णबोध-गुरु-तीर्थ-पयोब्धि-पारा … (śrīpūrṇabōdha-guru-tīrtha-payōbdhi-pārā) …, this stōtra flooded his mind, overpowering the flooded Tuṅgabhadrā and as he reached the final-destination of the Vr̥ndāvana, everything was over. As the last words streamed from his mouth, “कीर्तिर्दिग्विदिता विभूतिरतुला (kīrtirdigviditā vibhūtiratulā)…" it coincided with the last slab covering the encapsulation of the Vr̥ndāvana and, alongside was the crescendo of the onlookers cries, hailing the completion of the ceremony.


Finally, Appaṇācārya was denied the opportunity to fill his sights with the divine and auspicious form of Rayaru.


That, however, did not dent his fortunes. The stōtra that gushed forth as a vocal stream from his mouth, with utmost devotion, succeeded in washing the feet of Rayaru. Just as such, a disembodied voice helped round off the stōtra’s finish with “साक्षी हयास्योत्रहि…(sākṣī hayāsyōtrahi…).


In turn, all of us too became the beneficiaries of this rare gem of a stōtra.   


Perhaps, it may not sound ludicrous if one were to state that apart from ‘Vayustuti’ yet another composition by a Gr̥hastha(a householder or married man), that is chanted even by renowned ascetics, is the Śrī Rāghavēndra Stōtra.


That the contemplation of such a special Stōtra is being attempted by an inconsequential person such as I, is rightfully an endeavour transcending any innate capabilities or merits.


However immature this attempt might sound, I have immense faith that the desire or seed for this action that was sown by that guru, will also help this series reach a meaningful completion. With that trust imbued in me, I have ventured forth to complete this elementary foreword.


For several months though I went on to read several descriptive books however I could not progress even by a small step in this path of contemplation. I concede that it is Rayaru who has led me through this time around.


When I was searching the internet for something, I chanced upon the work of a scholar from Mantralaya (I beg to be forgiven for not being able to get his name or credentials) and the audio recording of Palimārumaṭhādhīśaru - Śrī Vidyādhīśa Tīrtharu covering a talk on the first few slokas of this Stōtra. Thereafter, I was able to read the Kannada translation of our Pūjya guru Shri Bannan̄je Gōvindācāryaru, of this Stōtra and a few Sanskrit analyses. This led to the sprouting of the desire once again to march ahead.


As usual, I have received support and inputs from Shri Prasad while rendering this work into English.  With this I am encouraged to share this offering with all my Bandhus here, after a long hiatus, with all enthusiasm to commence and proceed on this series with affectionate blessings from Rayaru and thereon with the affectionate encouragement from ŚrīHari Vāyu Gurugalu.
(Original in Kannada by Śrī  Krishna B R/ English translation/ Devanagari inputs by Śrī Prasad BS)

No comments:

Post a Comment

ಗೋ-ಕುಲ Go-Kula