Thursday 17 August 2017

Bhava Spandana - 3

ಭಾವ ಸ್ಪಂದನ by “ತ್ರಿವೇಣಿ ತನಯ

ಪ್ರಶಾಂತ ಮನ -ಶ್ರೀ ಕೃಷ್ಣ ವನ

ಎಲ್ಲರಿಗೂ ನಿರ್ಮತ್ಸರ ಪ್ರೀತಿಯನೇ ನೀಡು,
ನಿರ್ಮಲವಾಗುವುದೆನಿತು ಮನದ ಮಡು ನೋಡು,
ಪ್ರಶಾಂತ ನಿರ್ಮಲವಿರಲದು ಮನದ ಮಡು,
ಕೃಷ್ಣ ನಾಟ್ಯವಾಡುವ ಹೃತ್ಕಮಲದ ಚೆಲುಬೀಡು.

ನಂಬಿಕೆಯ ಆಟ 

ನಂಬಿಕೆಯಲ್ಲೇ ನಡೆದಿದೆ ಎಲ್ಲ ಆಟ,
ಅಳುಕಿಂದ ಮಾಡುವುದೆಲ್ಲ ಬೂಟಾಟ,
ನಂಬಿಕೆಯೊಂದೇ ನಮ್ಮ ಸ್ತರದ ಸಾಧನ,
ಅವನೆತ್ತಿ ಕೊಟ್ಟಾಗಲಷ್ಟೇ ಲಭ್ಯ ನಿಜ ಜ್ಞಾನ.

ಅನುಭವ -ಅನುಭಾವ

ನೋಟಕ್ಕೆ ಕಾಣಲ್ಲ,
ಕಾಣುವುದು ಕಣ್ಣಲ್ಲ,
ಕಣ್ಣೋಟದೊಳಗಣ ಅನುಭವ,
ಕಳೆವುದದೇ ಭವದ ಈ ನೋವ.

ನಾಟಕದ ಬಾಳು -ತೀರದ ಗೋಳು

ಸಾಕು ಸಾಕೀ ಜಗ ಮೆಚ್ಚಿಸುವ ಗೀಳು,
ಯಾವ ಪುರುಷಾರ್ಥಕ್ಕೆ ನಾಟಕದ ಬಾಳು,
ಜ್ಞಾನ ಕಂಡಲ್ಲಿ ತಪ್ಪದೇ ಕಾಲಿಗೆ ಬೀಳು,
ಸೇವಿಸುತಲವರ ಮೇಲಿನ ವಿಳಾಸ ಕೇಳು.

ಎಷ್ಟು ಬೇಕು?-ಇರುವಷ್ಟು ಸಾಕು

ಎಲ್ಲೀವರೆಗೆ ಈ ಬೇಕು ಬೇಕೆಂಬಾಟ,
ಸಾಕೆನ್ನುವವರೆಗೂ ನಿಲ್ಲದು ನೋಡು ಕಾಟ,
ನೀನೇನೇ ಆಡುತಿರು ದೊಂಬರಾಟ,
ನಡೆಯಬೇಕಾದ್ದೇ ನಡೆವುದದು ದಿಟ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula